Select Your Language

Notifications

webdunia
webdunia
webdunia
webdunia

ನಟಿ ಮಲ್ಲಿಕಾ ಶೆರಾವತ್ ಗೆ ನಿರ್ದೇಶಕರು ಬೆಳಗಿನ ಜಾವ ಮೂರು ಗಂಟೆಗೆ ಕೋಣೆಗೆ ಬಾ ಅಂದಿದ್ರಂತೆ!

ನಟಿ ಮಲ್ಲಿಕಾ ಶೆರಾವತ್ ಗೆ ನಿರ್ದೇಶಕರು ಬೆಳಗಿನ ಜಾವ ಮೂರು ಗಂಟೆಗೆ ಕೋಣೆಗೆ ಬಾ ಅಂದಿದ್ರಂತೆ!
ಮುಂಬೈ , ಶನಿವಾರ, 7 ಜುಲೈ 2018 (06:57 IST)
ಮುಂಬೈ : ಮರ್ಡರ್ ಸಿನಿಮಾದಲ್ಲಿ ನಟಿಸಿದ  ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರು ಕೂಡ ತಮ್ಮ ಸಿನಿಮಾ ಜೀವನದಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆಯನ್ನು ಎದುರಿಸಿದ್ದಾರಂತೆ.




ಈ ಬಗ್ಗೆ ಸ್ವತಃ ನಟಿ ಮಲ್ಲಿಕಾ ಶೆರಾವತ್ ಅವರೇ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ಕಾಸ್ಟಿಂಗ್ ಕೌಚ್ ವಿರೋಧಿಸಿದ ಸಲುವಾಗಿಯೇ ತಾನು ಅನೇಕ ಸಿನಿಮಾಗಳಿಂದ ಅವಕಾಶ ವಂಚಿತಳಾಗಬೇಕಾಯ್ತು. ಮರ್ಡರ್ ಸಿನಿಮಾದ ನಂತರ ನನಗೆ ಹೆಚ್ಚೆಚ್ಚು ಸಿನಿಮಾಗಳ ಅವಕಾಶ ಸಿಕ್ಕಿತ್ತು. ಹೀಗೆ ಸಿನಿಮಾದ ಚಿತ್ರೀಕರಣವೊಂದರ ಸಂದರ್ಭದಲ್ಲಿ ಸಹನಟನೊಂದಿಗೆ ತೆರೆಯ ಮೇಲೆ ಇಂಟಿಮೇಟ್ ದೃಶ್ಯಗಳು ಅಂದ್ರೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ನಟಿಸಬೇಕಿತ್ತು. ಚಿತ್ರೀಕರಣ ಮುಗಿದ ಮೇಲೂ ಆ ನಟ ನನ್ನನ್ನು ತನ್ನ ಕೋಣೆಗೆ ಕರೆದ. ಅದಕ್ಕೆ ಒಲ್ಲೆ ಅಂದ ಕಾರಣಕ್ಕೆ ನಾನು ಚಿತ್ರರಂಗದಿಂದ ಅವಕಾಶ ವಂಚಿತಳಾದೆ’ ಎಂದು ತಿಳಿಸಿದ್ದಾರೆ.


 ಅಲ್ಲದೇ ‘ನಿರ್ದೇಶಕರು ಕೂಡ ಬೆಳಗಿನ ಜಾವ ಮೂರು ಗಂಟೆಗೆ ನನ್ನ ಕೋಣೆಗೆ ಬಾ ಅಂತ ನನಗೆ ಆಹ್ವಾನ ನೀಡಿದ್ರು. ಇಂತದ್ದಕ್ಕೆಲ್ಲಾ ನಾನು ಒಪ್ಪಿಕೊಳ್ಳಲಿಲ್ಲ. ಆಫ್ ಸ್ಕ್ರೀನ್ ರೊಮ್ಯಾನ್ಸ್ ಗೆ ಕಾಂಪ್ರಮೈಸ್ ಆಗಲಿಲ್ಲ. ಈ ವಿಚಾರಗಳನ್ನ ಮಾತನಾಡೋಕೆ ನನಗೆ ಈ ಕ್ಷಣದಲ್ಲೂ ಭಯವಾಗ್ತಿದೆ’ ಎಂದು ಮಲ್ಲಿಕಾ ಶೆರಾವತ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾಸ್ಯ ನಟ ಮಲ್ಲೇಶ್ ಇನ್ನಿಲ್ಲ!