Select Your Language

Notifications

webdunia
webdunia
webdunia
webdunia

ಬಿಡುಗಡೆಗೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ ಜಾನ್ ಅಬ್ರಹಾಂ ಹೊಸ ಸಿನಿಮಾ

ಬಿಡುಗಡೆಗೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ ಜಾನ್ ಅಬ್ರಹಾಂ ಹೊಸ ಸಿನಿಮಾ
ಮುಂಬೈ , ಶುಕ್ರವಾರ, 6 ಜುಲೈ 2018 (07:05 IST)
ಮುಂಬೈ : ಬಿಡುಗಡೆಗೆ ಸಿದ್ದವಾಗಿರುವ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ನಟಿಸಿದ ಹೊಸ ಸಿನಿಮಾ ‘ಸತ್ಯಮೇವ ಜಯತೆ’ ಸಿನಿಮಾಕ್ಕೆ ಇದೀಗ ಸಮಸ್ಯೆಯೊಂದು ಎದುರಾಗಿದೆ.


‘ಸತ್ಯಮೇವ ಜಯತೆ’ ಸಿನಿಮಾ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ಸಾಕಷ್ಟು ಸೌಂಡ್ ಮಾಡಿತ್ತು. ಜೊತೆಗೆ ಈ ಚಿತ್ರ ಇದೇ ಆಗಸ್ಟ್ 15ರಂದು ತೆರೆಕಾಣಲು ಸಿದ್ಧವಾಗಿದೆ. ಆದರೆ ಈ ಚಿತ್ರ ಟ್ರೇಲರ್ ನಲ್ಲಿ ಕಾಣಿಸುವ ಮೊಹರಂ ದೃಶ್ಯದಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡುತ್ತಿದ್ದು, ಇದು ಶಿಯಾ ಪಂಗಡದ ಭಾವನೆಗೆ ನೋವನ್ನುಂಟು ಮಾಡಿದೆ ಎಂದು ಬಿಜೆಪಿಯ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಜಫ್ರಿ ಅವರು ದೂರು ದಾಖಲಿಸಿದ್ದಾರೆ. 


ಜೊತೆಗೆ ಈ ದೂರನ್ನು ಮುಂಬೈನ ಸೆಂಟ್ರಲ್​ ಬೋರ್ಡ್​ ಆಫ್ ಫಿಲ್ಮ್ ಸರ್ಟಿಫಿಕೇಶನ್​ನ ಮುಖ್ಯ ಕಚೇರಿಗೆ ವರ್ಗಾಯಿಸಬೇಕೆಂದು ಮನವಿ ಮಾಡಿದ್ದಾರೆ. ಚಿತ್ರತಂಡ ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಜಫ್ರಿ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬಕ್ಕೂ ಮೊದಲೇ ರಣ್‍ವೀರ್ ಸಿಂಗ್ ಗೆ ಸಿಕ್ಕಿದೆ ದುಬಾರಿ ಗಿಪ್ಟ್