Publish Date: Fri, 06 Jul 2018 (06:57 IST)
Updated Date: Fri, 06 Jul 2018 (14:00 IST)
ಮುಂಬೈ : ಜುಲೈ 6ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ರಣ್‍ವೀರ್ ಸಿಂಗ್ ಅವರಿಗೆ ಈಗಾಗಲೇ ಅವರ ಆಪ್ತರೊಬ್ಬರಿಂದ ದುಬಾರಿ ಗಿಪ್ಟ್ವೊಂದು ಸಿಕ್ಕಿದೆ.
ಹೌದು ನಟ ರಣ್‍ವೀರ್ ಸಿಂಗ್ ಅವರಿಗೆ ನಿರ್ದೇಶಕ ರೋಹಿತ್ ಶೆಟ್ಟಿ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ದುಬಾರಿ ವಾಚ್ ಬರ್ತ್ ಡೇ ಗಿಫ್ಟ್ ಆಗಿ ನೀಡುವುದರ ಮೂಲಕ ಸರ್ಪ್ರೈಸ್ ನೀಡಿದ್ದಾರೆ.
ಈ ಬಗ್ಗೆ ಟ್ವಟ್ಟರ್ ನಲ್ಲಿ ಫೋಟೋ ಹಾಕಿರುವ ನಟ ರಣ್‍ವೀರ್ ಸಿಂಗ್ ಅವರು,’ ಇದು ನನ್ನ ಬಾಸ್ ಕಡೆಯಿಂದ ಸಿಕ್ಕ ಬರ್ತ್ ಡೇ ಗಿಫ್ಟ್. ಎಲ್ಲರಿಗಿಂತ ಮೊದಲ ವಿಶ್ ಮಾಡಿದ್ದಾರೆ. ನನ್ನ ಬಳಿಯಿರುವ ವಾಚ್‍ಗಳಲ್ಲಿ ಇದು ಸೆಕ್ಸಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ