Select Your Language

Notifications

webdunia
webdunia
webdunia
webdunia

ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ ದೀಪಿಕಾ ಪಡುಕೋಣೆ..

ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ ದೀಪಿಕಾ ಪಡುಕೋಣೆ..

ನಾಗಶ್ರೀ ಭಟ್

ಬೆಂಗಳೂರು , ಶುಕ್ರವಾರ, 23 ಫೆಬ್ರವರಿ 2018 (19:41 IST)
ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ಜನರು ದುರ್ಬಲಗೊಳ್ಳುತ್ತಿದ್ದು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಬುಧವಾರ ನಡೆದ ಮಾಹಿತಿ ತಂತ್ರಜ್ಞಾನದ ವಿಶ್ವ ಕಾಂಗ್ರೆಸ್ (WCIT) ನಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಷ್ಟೇ ಅಲ್ಲ 32 ವರ್ಷದ ದೀಪಿಕಾ ನಾನು ಸಹ ಖಿನ್ನತೆಯನ್ನು ಅನುಭವಿಸಿದ್ದೇನೆ. ಖಿನ್ನತೆ ಏನೆಂಬುದರ ಅರಿವು ನನಗಿದೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳಿದರು.
ಅದಷ್ಟೇ ಅಲ್ಲ ತಮ್ಮ ವೈಯಕ್ತಿಕ ಜೀವನದ ಘಟನೆಗಳನ್ನು ನೆನಸಿಕೊಂಡ ದೀಪಿಕಾ ತಮ್ಮ ಜೀವನದಲ್ಲಿ 2014 ರಲ್ಲಿ ನಡೆದ ಬ್ರೇಕಪ್ ಕುರಿತಾಗಿ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದು, ಅದರಿಂದ ಹೊರಬರಲು ತುಂಬಾ ಕಷ್ಟಪಟ್ಟಿರುವುದಾಗಿ ಹೇಳಿಕೊಂಡರು. ಅಲ್ಲದೇ ದುಃಖ ಮತ್ತು ಖಿನ್ನತೆಗೆ ಬಹಳ ವ್ಯತ್ಯಾಸವಿದೆ ಅದನ್ನು ಮೊದಲು ಗುರುತಿಸಬೇಕು, ಯಾವುದೇ ಒಬ್ಬ ವ್ಯಕ್ತಿಯು ಒಬ್ಬಂಟಿಯಲ್ಲ ಪ್ರತಿ ಐದು ಜನರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಾರೆ. ನಾವು ಪರಸ್ಪರ ಸಹಾಯ ಭಾವನೆಯನ್ನು ತೋರುವುದು ಮತ್ತು ತಮ್ಮ ಭಾವನೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಸುಲಭವಾಗಿ ಖಿನ್ನತೆಯಿಂದ ಹೊರಬರಬಹುದು ಎಂದು ಹೇಳಿದರು.
 
ಖಿನ್ನತೆಗೆ ನಿರ್ದಿಷ್ಟವಾದ ಕಾರಣಗಳಿರುವುದಿಲ್ಲ ಅದು ಯಾವ ಕಾರಣಕ್ಕಾದರೂ ಬರಬಹುದು ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡಾಗ ನಿಮ್ಮ ಭಾವನೆಗಳು ಧನಾತ್ಮಕತೆ ಎಡೆಗೆ ಸಾಗಿ ಖಿನ್ನತೆಯನ್ನು ಸರಿಪಡಿಸುವಲ್ಲಿ ನೆರವಾಗುತ್ತದೆ ಎಂದು ಹೇಳಿದರು. ಅಷ್ಟೇ ಅಲ್ಲ ಈ ಫಂಡೇಶನ್ ಬಹಳ ಸಮಯದ ನಂತರ ಆರಂಭವಾಗಿದೆ. ಇದರ ಉಪಯೋಗ ಪಡೆದುಕೊಳ್ಳಿ ಎಂಬುದನ್ನು ಸಹ ತಿಳಿಸಿದರು.
 
ಕೆಲವರಿಗೆ ಹೊರ ಬಂದು ಮುಕ್ತವಾಗಿ ಮಾತನಾಡಲಾಗುವುದಿಲ್ಲ ಅಲ್ಲದೇ ಅದಕ್ಕೆ ಅವರದೇ ಆದ ಕಾರಣಗಳು ಇರುತ್ತವೆ ಮತ್ತು ಕುಟುಂಬದ ಒತ್ತಡವು ಇರಬಹುದು. ನಾನು ಸಹ ಈ ತರಹದ ತೊಂದರೆಗಳನ್ನು ಅನುಭವಿಸಿದ್ದೇನೆ, ಅಂತಹ ಸಂದರ್ಭದಲ್ಲಿ ನನ್ನ ತಾಯಿ ನನಗೆ ಬಂಬಲವಾಗಿದ್ದರು ಎಂಬುದಾಗಿ ತಿಳಿಸಿದರು.
 
ಇತ್ತೀಚಿನ ದಿನಗಳಲ್ಲಿ ಖಿನ್ನತೆ ಎಲ್ಲಡೆಯಲ್ಲೂ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲೂ ಹೆಚ್ಚಾಗಿ ಉದ್ಯೋಗಿಗಳು ಎದುರಿಸುತ್ತಿರುವ ಮಾನಸಿಕ ಹಿಂಸೆಯ ಕುರಿತು ಮಾತನಾಡಿದ ದೀಪಿಕಾ ಅದನ್ನು ಯಾವುದೇ ಕಾರಣಕ್ಕೂ ಕಡೆಗಣೆಸಬಾರದು ಎಂದು ಹೇಳಿದರು, ಇಂತಹ ಸಂಸ್ಥೆಗಳು ನಿಮ್ಮನ್ನು ಒತ್ತಡದಿಂದ ಹೊರಬರುವ ತಿಳುವಳಿಕೆಯನ್ನು ನೀಡುವುದರೊಂದಿಗೆ ಆರೋಗ್ಯದ ಕಾಳಜಿಯ ಕುರಿತು ತಿಳಿಸುತ್ತದೆ ಆದ ಕಾರಣ ನೀವು ಸಂಸ್ಥೆಯ ಸಲಹೆಗಾರರನ್ನು ಸಂಪರ್ಕಿಸಿ ಆರೋಗ್ಯನ್ನು ಕಾಯ್ದುಕೊಳ್ಳಿ ಎನ್ನುವ ಮಾತನ್ನು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ಅರ್ಜುನ್ ಕಪೂರ್ ಮತ್ತು ಪರಿಣಿತಿ ಛೋಪ್ರಾ...