Publish Date: Wed, 13 Feb 2019 (13:46 IST)
Updated Date: Wed, 13 Feb 2019 (13:48 IST)
ಪಿಂಕ್‌ನಲ್ಲಿ ಒಟ್ಟಿಗೆ ಅಭಿನಯಿಸಿದ ನಂತರ ಈಗ ಅಮಿತಾಭ್ ಬಚ್ಚನ್ ಮತ್ತು ತಾಪ್ಸಿ ಪನ್ನು ಮತ್ತೊಮ್ಮೆ ಮನಸೆಳೆಯುವ ಕಥೆಯೊಂದಿಗೆ ಬರುತ್ತಿದ್ದಾರೆ. ಚಿತ್ರದ ಪಾತ್ರ ವರ್ಗದ ಪೋಸ್ಟರ್ ಅನ್ನು ನಿರ್ಮಾಪಕಿ ಗೌರಿ ಖಾನ್ ಅವರ ಪತಿ ಶಾರೂಖ್ ಖಾನ್ ಮತ್ತು ಬಿಗ್ ಬಿ ಮತ್ತು ತಾಪ್ಸಿ ನಿನ್ನೆ ಬಿಡುಗಡೆ ಮಾಡಿದರು.
'ಬದ್ಲಾ'ದ ಪೋಸ್ಟರ್‌ಗಳಲ್ಲಿ ನಾವು ಎರಡು ಮುಖ್ಯ ಪಾತ್ರಗಳ ತೀವ್ರತರವಾದ ಭಾಗವನ್ನು ನೋಡಬಹುದಾಗಿದೆ. ಪೋಸ್ಟರ್‌ನ ಎಡ ಭಾಗದಲ್ಲಿರುವ ಟ್ಯಾಗ್ ಲೈನ್ "ಮಾಫ್ ಕರ್ ದೇನಾ ಹರ್ ಬಾರ್ ಸಹಿ ನಹಿ ಹೋತಾ" ಅಂದರೆ ಪ್ರತಿ ಬಾರಿ ಯಾರನ್ನಾದರೂ ಕ್ಷಮಿಸುವುದು ಸರಿಯಲ್ಲ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲವನ್ನು ಕೆರಳಿಸಿದೆ. ಒಂದು ಪೋಸ್ಟರ್ ಅಮಿತಾಭ್ ಬಚ್ಚನ್ ಅವರ ಮೇಲೆ ಕೇಂದ್ರೀಕರಿಸಿದ್ದು, ಇನ್ನೊಂದು ತಾಪ್ಸೀ ಪನ್ನು ಅವರ ಮೇಲೆ ಕೇಂದ್ರೀಕರಿಸಿದೆ.
'ಬದ್ಲಾ' ಚಿತ್ರದ ಟ್ರೇಲರ್ ಇಂದು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿದೆ ಮತ್ತು ಕಥೆಯು ಕ್ಷಮೆ ನೀಡದ ಮತ್ತು ಸೇಡು ತೀರಿಸಿಕೊಳ್ಳುವ ಸಂದೇಶವನ್ನು ಸಮರ್ಥಿಸುತ್ತದೆ. ಟ್ರೇಲರ್ ಸೇಡನ್ನು ತೀರಿಸಿಕೊಳ್ಳಲು ಸತ್ಯಕ್ಕಾಗಿ ಹೋರಾಡುವ ನೈನಾ ಸೇಠಿ ಅವರ ಕಥೆಯನ್ನು ಆಳವಾಗಿ ತೋರಿಸುತ್ತದೆ. ತಾಪ್ಸೀ ಪನ್ನು ಅವರ ಅಭಿನಯದೊಂದಿಗೆ ಬಿಗ್ ಬಿ ಅವರ ಪ್ರಬಲವಾದ ಅಭಿನಯವು ನಿಮ್ಮನ್ನು ಖಂಡಿತವಾಗಿಯೂ ರೋಮಾಂಚನಗೊಳಿಸುತ್ತದೆ.
'ಬದ್ಲಾ' ಚಿತ್ರವನ್ನು ಸುಜಯ್ ಘೋಶ್ ನಿರ್ದೇಶಿಸಿದ್ದಾರೆ ಮತ್ತು ಶಾರುಖ್ ಖಾನ್ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಲಾಗಿದೆ. 'ಬದ್ಲಾ' ಸ್ಪ್ಯಾನಿಷ್ ರೋಮಾಂಚಕ ಚಲನಚಿತ್ರ 'ಕಾಂಟ್ರಾಟಿಯಂಪೋ' ದ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಚಿತ್ರವು ಮಾರ್ಚ್ 8, 2019 ರಂದು ಬಿಡುಗಡೆಯಾಗಲಿದೆ.