Select Your Language

Notifications

webdunia
webdunia
webdunia
webdunia

ಹನ್ಸಿಕಾ ಮೋಟ್ವಾನಿ ಕಡೆಯಿಂದ ಅಭಿಮಾನಿಗೊಂದು ಬ್ಯಾಡ್ ನ್ಯೂಸ್

ಹನ್ಸಿಕಾ ಮೋಟ್ವಾನಿ ಕಡೆಯಿಂದ ಅಭಿಮಾನಿಗೊಂದು ಬ್ಯಾಡ್ ನ್ಯೂಸ್
ಹೈದರಾಬಾದ್ , ಶುಕ್ರವಾರ, 17 ಆಗಸ್ಟ್ 2018 (13:49 IST)
ಹೈದರಾಬಾದ್ : ದಕ್ಷಿಣ ಭಾರತದ ಪ್ರಸಿದ್ಧ ನಟಿ ಹನ್ಸಿಕಾ ಮೋಟ್ವಾನಿ ಸಿನಿಮಾ ರಂಗದಿಂದ ದೂರ ಸರಿಯುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ.


ಹೌದು. ಸದ್ಯಕ್ಕೆ ಹನ್ಸಿಕಾ ಕೈಯಲ್ಲಿ ಚಿತ್ರಗಳಿಲ್ಲವಂತೆ. ಇನ್ನೊಂದು ಮೂಲಗಳ ಪ್ರಕಾರ, ಹನ್ಸಿಕಾ ಚಿತ್ರರಂಗದಿಂದ ದೂರ ಸರಿಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಉದ್ಯಮವನ್ನು ಆರಂಭಿಸುವ ಯೋಚನೆಯಲ್ಲಿರುವ ಹನ್ಸಿಕಾ, ಚಿತ್ರರಂಗದಿಂದ ದೂರ ಸರಿಯುವ ಸಾಧ್ಯತೆ ಹೆಚ್ಚಾಗಿದ್ದು, ನಟನೆಗೆ ಬೈ ಬೈ ಹೇಳಿ, ಸಿನಿಮಾ ಕ್ಷೇತ್ರ ಬಿಟ್ಟು ಬೇರೆ ಉದ್ಯಮಕ್ಕೆ ಕೈ ಜೋಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ.


ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಹನ್ಸಿಕಾ ತೆಲುಗು ಹಾಗೂ ತಮಿಳಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲೂ ಅರ್ಜುನ್ ನಟನೆಯ 'ದೆಸಾಮುದುರು' ಮೂಲಕ ಹಿರೋಯಿನ್ ಆಗಿ ವೃತ್ತಿ ಜೀವನ ಆರಂಭಿಸಿದ ಹನ್ಸಿಕಾ, ಜೂನಿಯರ್ ಎನ್ ಟಿಆರ್,ಧನುಷ್, ಸಿಂಬಾ ಮೊದಲಾದ ದಕ್ಷಿಣ ಭಾರತದ ಟಾಪ್ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ. ಅಲ್ಲದೇ ಸ್ಯಾಂಡಲ್ ವುಡ್ ನಲ್ಲಿ ಬಿಂದಾಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಹೃತಿಕ್ ರೋಷನ್ ಅಭಿನಯದ ಕೋಯಿ ಮಿಲ್ ಗಯಾ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಇವರು ನಟಿಸಿದ 'ಓಕೆ ಓಕ' ಸೇರಿದಂತೆ ಹಲವು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಕೂಡ ಮಾಡಿದ್ದವು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್ ಸಿಂಗ್ ಜೊತೆ ನಟಿಸಲು ರಣಬೀರ್ ಕಪೂರ್ ಇಷ್ಟವಿಲ್ವಾ. ಈ ಪ್ರಶ್ನೆ ಉದ್ಭವಿಸಲು ಕಾರಣವೇನು?