Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಕಳ್ಳತನ ಮಾಡುತ್ತಿದ್ದ ಟಾಲಿವುಡ್ ನಟ ಅರೆಸ್ಟ್

webdunia
ಗುರುವಾರ, 16 ಆಗಸ್ಟ್ 2018 (07:06 IST)
ಹೈದರಾಬಾದ್ : ತನ್ನ ತಂಡದೊಂದಿಗೆ ಕಳ್ಳತನ ಮಾಡುತ್ತಿದ್ದ ಟಾಲಿವುಡ್ ನಟನೊಬ್ಬ ನನ್ನು ಹಾಗೂ ಆತನ ಸಹಾಯಕನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.


ಆತ ಬೇರೆ ಯಾರು ಅಲ್ಲ. ‘ನಿವಿರು’ ಚಿತ್ರದಲ್ಲಿ ನಾಯಕನಾಗಿ ನಟಿಸಿದ ನಟ ಮಹೇಶ್ ಹಾಗೂ ಆತನ ಸಹಾಯಕ ವಿಕ್ಕಿ ಬಾಲಾಜಿ ಅಲಿಯಾಸ್ ವಿಕ್ಕಿ ರಾಜ್. ಇದೀಗ ಇವರಿಬ್ಬರನ್ನು ಬಂಧಿಸಿದ ಪೊಲೀಸರು ಅವರಿಂದ 15ಲಕ್ಷ ಮೌಲ್ಯದ 50 ತೊಲ ಬಂಗಾರ, 30 ತೊಲ ಬೆಳ್ಳಿ ಹಾಗೂ  3000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.


ನಟ ಮಹೇಶ್​ 'ನಿವಿರು'ಎನ್ನುವ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಣ  ಮಾಡಿದ್ದ. ಆದರೆ, ಈ ಚಿತ್ರ ​ ಫ್ಲಾಪ್​ ಆಗಿ, ಈತನನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಪರಿಣಾಮ ಸುಲಭವಾಗಿ ದುಡ್ಡು ಸಂಪಾದನೆ ಮಾಡಲು ಕಳ್ಳತನದ ದಾರಿ ಹಿಡಿದಿದ್ದ. ಈತನಿಗೆ ವಿಕ್ಕಿ ಬಾಲಾಜಿ ಸಾಥ್ ನೀಡಿದ್ದ. ಹಗಲು ಹೊತ್ತು ಕೇಬಲ್ ಆಪರೇಟರ್​ ಸೋಗಿನಲ್ಲಿ ಮನೆಗಳನ್ನು ಸುತ್ತಾಡುತ್ತಿದ್ದ ಮಹೇಶ್​ ರಾತ್ರಿವೇಳೆ ತನ್ನ ತಂಡದೊಂದಿಗೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ಹೆಬ್ಬುಲಿ ಬೆಡಗಿ ಅಮಲಾ ಪೌಲ್