Select Your Language

Notifications

webdunia
webdunia
webdunia
webdunia

ನಟಿ ಕಾಜಲ್ ಅಗರ್ ವಾಲ್ ಕಿಕಿ ಚಾಲೆಂಜ್‌ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದು ಹೇಗೆ ಗೊತ್ತಾ?

ಹೈದರಾಬಾದ್
ಹೈದರಾಬಾದ್ , ಮಂಗಳವಾರ, 14 ಆಗಸ್ಟ್ 2018 (10:05 IST)
ಹೈದರಾಬಾದ್ : ವಿಶ್ವದೆಲ್ಲೆಡೆ ಕಿಕಿ ಚಾಲೆಂಜ್‌ ಬಗ್ಗೆ ಬಾರೀ ಸುದ್ದಿಯಾಗುತ್ತಿದ್ದು, ಈ ಚಾಲೆಂಜ್ ಅಪಾಯವೆಂದು ಪೊಲೀಸರು ಎಚ್ಚರಿಕೆ ನೀಡಿದ್ದರೂ  ಕೂಡ ಅದನ್ನು ಸ್ವೀಕರಿಸಿ ಜನರು ಜೀವಕ್ಕೆ ಆಪತ್ತು  ತಂದುಕೊಳ್ಳುತ್ತಿದ್ದಾರೆ.


ಇದೀಗ ತೆಲುಗು ನಟಿ ಕಾಜಲ್ ಅಗರ್ ವಾಲ್ ಈ ಕಿಕಿ ಡ್ಯಾನ್ಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ನಟಿ ಕಾಜಲ್ ಅಗರ್ ವಾಲ್ ನಟ ಬೆಲ್ಲಕೊಂಡ ಶ್ರೀನಿವಾಸ್ ಜೊತೆ ಸೇರಿಕೊಂಡು ವ್ಹೀಲ್ ಚೇರ್ ಮೇಲೆ ಕುಳಿತು ಕಿಕಿ ಹಾಡಿಗೆ ವಿಶಿಷ್ಟವಾಗಿ ನೃತ್ಯ ಮಾಡಿದ್ದಾರೆ. ಈ ನೃತ್ಯದ ವಿಡಿಯೋವನ್ನು ಕಾಜಲ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.


ಈ ಮೂಲಕ ಕಾಜಲ್ ಕಿಕಿ ಚಾಲೆಂಜ್​ ಸ್ವೀಕರಿಸುವವರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಹಾಗೇ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಸಿಕ್ಕರೆ ಸ್ಯಾಂಡಲ್ ವುಡ್ ನಲ್ಲಿ ನಟಿಸ್ತಾರಂತೆ ನಟ ನಾಗಾರ್ಜುನ್