Select Your Language

Notifications

webdunia
webdunia
webdunia
webdunia

ಕೇರಳದ ನಿರಾಶ್ರಿತರ ನೆರವಿಗೆ ಟಾಲಿವುಡ್ ನ ಸೂಪರ್ ಸ್ಟಾರ್ ನಟ ಪ್ರಭಾಸ್ ನೀಡಿದ ಹಣವೆಷ್ಟು ಗೊತ್ತಾ?

ಕೇರಳದ ನಿರಾಶ್ರಿತರ ನೆರವಿಗೆ ಟಾಲಿವುಡ್ ನ ಸೂಪರ್ ಸ್ಟಾರ್ ನಟ ಪ್ರಭಾಸ್ ನೀಡಿದ ಹಣವೆಷ್ಟು ಗೊತ್ತಾ?
ಹೈದರಾಬಾದ್ , ಶುಕ್ರವಾರ, 17 ಆಗಸ್ಟ್ 2018 (07:06 IST)
ಹೈದರಾಬಾದ್ : ಕೇರಳದ ಮಹಾಮಳೆಗೆ ನಲುಗಿದ ಸಂತ್ರಸ್ತರ ನೆರವಿಗೆ ಹಲವು ನಟ ನಟಿಯರು ತಮ್ಮ ಕೈಲಾದ ಸಹಾಯವನ್ನು ನೀಡುತ್ತಿದ್ದು, ಇದೀಗ ಟಾಲಿವುಡ್ನ ಸೂಪರ್ ಸ್ಟಾರ್ ಪ್ರಭಾಸ್ ಅವರು ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ಚಾಚಿದ್ದಾರೆ.


ಕೇರಳದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಪ್ರವಾಹ ಉಂಟಾಗಿದ್ದು, ಹಲವಾರು ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಪ್ರವಾಹದಿಂದಾಗಿ ಕೇರಳದಲ್ಲಿ ಅನೇಕರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.


ಇದೀಗ ನಟ ಪ್ರಭಾಸ್ ಕೂಡ ಕೇರಳದ ನಿರಾಶ್ರಿತರ  ನೆರವಿಗೆ ಧಾವಿಸಿದ್ದು, ಜನರಿಗೆ ಪುನರ್ ವಸತಿ ಕಲ್ಪಿಸಲು 1 ಕೋಟಿ ರೂ. ಅನ್ನು ಕೇರಳ ಸರ್ಕಾರಕ್ಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಗುವಿನ ತಾಯಿಯಾದ ಖ್ಯಾತ ಗಾಯಕಿ ನಂದಿತಾ