Publish Date: Sat, 28 May 2022 (08:50 IST)
Updated Date: Sat, 28 May 2022 (09:08 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಎನ್ ಸಿಬಿ ಅಧಿಕಾರಿಗಳು ತನಿಖೆ ನಡೆಸಿ ಶಾರುಖ್ ಖಾನ್ ಪುತ್ರನಿಗೆ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ನೀಡಿತ್ತು. ಇದರ ಬೆನ್ನಲ್ಲೇ ಆರ್ಯನ್ ವಿದೇಶಕ್ಕೆ ತೆರಳಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಆರ್ಯನ್ ಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿಯಿದೆ. ಹೀಗಾಗಿ ಇದನ್ನು ಕಲಿಯುವ ಸಲುವಾಗಿ ಅಮೆರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.
ಇಷ್ಟು ದಿನ ತಮ್ಮ ಮೇಲೆ ಆರೋಪವಿದ್ದ ಕಾರಣ ಅವರಿಗೆ ವಿದೇಶ ಪ್ರವಾಸಕ್ಕೆ ನಿರ್ಬಂಧವಿತ್ತು. ಆದರೆ ಈಗ ದೋಷಮುಕ್ತರಾಗಿರುವುದರಿಂದ ಆರಾಮವಾಗಿ ವಿದೇಶಕ್ಕೆ ತೆರಳಿ ತಮ್ಮ ಕನಸು ನನಸು ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.