ಮುಂಬೈ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸದಿಂದಾಗಿ ಹಿಂದಿ ಕಿರುತೆರೆ ನಟಿಯ ಮದುವೆ ನಿಶ್ಚಿತಾರ್ಥವೇ ಬ್ರೇಕಪ್ ಆಗಿದೆ!
ಹಿಂದಿ ಕಿರುತೆರೆ ವಾಹಿನಿ, ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ಆರ್ಶಿ ಖಾನ್ ಆಫ್ಘಾನಿಸ್ತಾನ ಮೂಲದ ಕ್ರಿಕೆಟಿಗರೊಬ್ಬರ ಜೊತೆ ಮದುವೆ ಮಾಡಿಕೊಳ್ಳುವ ತಯಾರಿಯಲ್ಲಿದ್ದರಂತೆ. ಈ ಬಗ್ಗೆ ಅವರ ಪೋಷಕರೇ ಮದುವೆ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಸಿದ್ದರು.
ಆದರೆ ಈಗ ಆಫ್ಘನ್ ಹುಡುಗನ ಜೊತೆ ಮದುವೆ ಮಾಡಿಕೊಡುವುದು ಸೂಕ್ತವಲ್ಲ ಎಂದು ಪೋಷಕರೇ ತೀರ್ಮಾನಿಸಿದ್ದಾರಂತೆ. ಈಗ ಅವರ ತಂದೆ-ತಾಯಿ ಭಾರತೀಯ ಹುಡುಗನನ್ನೇ ಹುಡುಕುತ್ತಿದ್ದಾರಂತೆ. ಅಂತೂ ಆಫ್ಘನ್ ನಲ್ಲಿ ತಾಲಿಬಾನಿಗಳ ಅಟ್ಟಹಾಸದಿಂದ ನಟಿಯ ಮದುವೆಯೇ ಮುರಿದುಬಿದ್ದಿದೆ.