ಮುಂಬೈ: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಅನಿಮಲ್ ಸಿನಿಮಾ ಮೊದಲ ದಿನದ ಗಳಿಕೆಯೆಷ್ಟು ಗೊತ್ತಾ?
									
			
			 
 			
 
 			
					
			        							
								
																	ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಮೊದಲ ದಿನವೇ ಬಾಕ್ಸ್ ಅಫೀಸ್ ದಾಖಲೆಯನ್ನು ಪುಡಿಗಟ್ಟಬಹುದು, ನೂರು ಕೋಟಿ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರಗಳಿತ್ತು. ಆದರೆ ನೂರು ಕೋಟಿ ಗಳಿಕೆ ಮಾಡಲು ಆಗಿಲ್ಲ. ಹಾಗಿದ್ದರೂ 61 ಕೋಟಿ ರೂ. ಕೊಳ್ಳೆ ಹೊಡೆದಿದೆ.
									
										
								
																	ಇದೀಗ ವಾರಂತ್ಯದಲ್ಲಿ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ‍್ಯತೆಯಿದೆ. ರಣಬೀರ್ ಕಪೂರ್ ವಯಲೆನ್ಸ್, ಆಕ್ಷನ್ ಗಳನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕೆಲವರು ಹಿಂಸೆ ಅತಿಯಾಯಿತು ಎಂದವರೂ ಇದ್ದಾರೆ.
									
											
							                     
							
							
			        							
								
																	ಜೊತೆಗೆ ರಶ್ಮಿಕಾ ಜೊತೆಗಿನ ರಣಬೀರ್ ಹಸಿ-ಬಿಸಿ ದೃಶ್ಯಗಳು ಪಡ್ಡೆ ಹೈಕಳ ಹೃದಯ ಬೆಚ್ಚಗಾಗಿಸಿದೆ. ಸಿನಿಮಾ ಬರೋಬ್ಬರಿ 3 ಗಂಟೆ 21 ನಿಮಿಷ ಅವಧಿಯದ್ದಾಗಿದೆ. ಹೀಗಾಗಿ ಕೆಲವರಿಗೆ ಬೋರ್ ಹೊಡೆದಿದೆ. ಹಾಗಿದ್ದರೂ ವೀಕೆಂಡ್ ನಲ್ಲಿ ನೂರು ಕೋಟಿ ದಾಟುವುದಂತೂ ಖಚಿತ.