Webdunia - Bharat's app for daily news and videos

Install App

ಕೋಟ್ಯಂತರ ರೂಪಾಯಿ ಕಾರಿದ್ದರು ಆಟೋ ಏರಿದ ಆಲಿಯಾ ಭಟ್‌, ಸರಳತೆಗೆ ಮನಸೋತ ನೆಟ್ಟಿಗರು

Sampriya
ಭಾನುವಾರ, 8 ಡಿಸೆಂಬರ್ 2024 (19:12 IST)
Photo Courtesy X
ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಆಲಿಯಾ ಭಟ್ ಅವರಲ್ಲಿ ಕೋಟ್ಯಂತರ ರೂಪಾಯಿ ಕಾರು ಇದ್ದರೂ ಆಟೋದಲ್ಲಿ ಪ್ರಯಾಣ ಮಾಡಿ ಇದೀಗ ಸುದ್ದಿಯಾಗಿದ್ದಾರೆ.

ಶನಿವಾರ (ಡಿಸೆಂಬರ್​ 7) ಸಂಜೆ ಆಲಿಯಾ ಭಟ್ ಅವರು ಮುಂಬೈನಲ್ಲಿ ಆಟೋ ಸವಾರಿ ಮಾಡಿದ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ನೋಡಿದ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ನಾಟಕ ಎಂದಿದ್ದಾರೆ, ಇನ್ನೂ ಕೆಲವರು ಆಲಿಯಾ ಭಟ್​ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್​ ಅವರು ಸರಳತೆಯನ್ನು ತೋರ್ಪಡಿಸುವ ಸಲುವಾಗಿ ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ ಎಂಬುದು ಕೆಲವರ ವಾದ. ಆದರೆ ಅಸಲಿ ವಿಚಾರ ಬೇರೆ ಇದೆ. ಅವರು ಹೋಗಬೇಕಿದ್ದ ದಾರಿ ತುಂಬ ಕಿರಿದಾಗಿದೆ. ಹಾಗಾಗಿ, ಅಷ್ಟು ಚಿಕ್ಕ ರಸ್ತೆಯಲ್ಲಿ ದೊಡ್ಡ ಕಾರುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆ ಕಾರಣದಿಂದಲೇ ಅವರು ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.

ಆಲಿಯಾ ಭಟ್ ಜೊತೆ ಅವರ ಬಾಡಿ ಗಾರ್ಡ್ಸ್​ ಕೂಡ ಇದ್ದರು. ಆಲಿಯಾ ಅವರನ್ನು ಕಂಡ ಪಾಪರಾಜಿಗಳು ಫೋಟೋ, ವಿಡಿಯೋ ಸಲುವಾಗಿ ಫಾಲೋ ಮಾಡಿದ್ದಾರೆ. ತಮಗಾಗಿ ಒಂದು ಪೋಸ್ ನೀಡುವಂತೆ ಪಾಪರಾಜಿಗಳು ಮನವಿ ಮಾಡಿದ್ದಾರೆ.

ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಆಲಿಯಾ ಭಟ್ ಅವರು ಗುರುತಿಸಿಕೊಂಡಿದ್ದಾರೆ. ಅವರು ನಟಿಸಿದ ಅನೇಕ ಸಿನಿಮಾಗಳು ಸೂಪರ್​ ಹಿಟ್ ಆಗಿವೆ. ಸಖತ್ ಬೇಡಿಕೆ ಇರುವಾಗಲೇ ಅವರು ರಣಬೀರ್​ ಕಪೂರ್​ ಜೊತೆ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಈ ಜೋಡಿಗೆ ರಹಾ ಹೆಸರಿನ ಹೆಣ್ಣು ಮಗು ಇದೆ. ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎರಡನ್ನೂ ಆಲಿಯಾ ಭಟ್​ ಅವರು ಸರಿ ದೂಗಿಸಿಕೊಂಡು ಸಾಗುತ್ತಿದ್ದಾರೆ. ಹಲವು ಸಿನಿಮಾಗಳ ಆಫರ್​ ಅವರ ಕೈಯಲ್ಲಿ ಇವೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments