ಬೆಂಗಳೂರು: ನಟಿ ತಮನ್ನಾ ಭಾಟಿಯಾ ಅವರೊಂದಿಗಿನ ಬ್ರೇಕಪ್ ಬೆನ್ನಲ್ಲೇ ನಟ ವಿಜಯ್ ವರ್ಮಾ ಅವರು ಯಾವುದೇ ಸಂಬಂಧವನ್ನು ಐಸ್ ಕ್ರೀಂನಂತೆ ಆನಂದಿಸಬೇಕೆಂದು ಹೇಳಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಸಂಬಂಧಗಳ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡರು. ಸವಾಲುಗಳ ಮಧ್ಯೆಯೇ ಬದುಕನ್ನು ಹೇಗೆ ಆನಂದಿಸಬೇಕೆಂದು ಹೇಳಿದರು. ಇದೀಗ ನಟಿ ತಮನ್ನಾ ಭಾಟಿಯಾ ಜತೆಗಿನ ಬ್ರೇಕಪ್ ಬೆನ್ನಲ್ಲೇ ವಿಜಯ್ ವರ್ಮಾ ನೀಡಿರುವ ಹೇಳಿಕೆ ಸುದ್ದಿಯಾಗಿದೆ.
ಯಾವುದೇ ಸಂಬಂಧಗಳನ್ನು ಸಿಹಿ, ಉಪ್ಪು, ವಿಭಿನ್ನ ರುಚಿಗಳನ್ನು ಹೊಂದಿರುವ ಐಸ್ ಕ್ರೀಂಗೆ ಹೋಲಿಸಿದರು. ನಿಮ್ಮ ದಾರಿಗೆ ಬಂದದ್ದನ್ನು ಸ್ವೀಕರಿಸಿ ಆನಂದಿಸುವುದು ಉತ್ತಮ, ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳುವುದು ಉತ್ತಮ ಎಂದು ವಿಜಯ್ ಸಲಹೆ ನೀಡಿದರು.
ಸಂಬಂಧಗಳನ್ನು ಐಸ್ ಕ್ರೀಂನಂತೆ ಆನಂದಿಸಿದರೆ, ನೀವು ತುಂಬಾ ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಂದರೆ ಯಾವುದೇ ರುಚಿ ಬಂದರೂ ನೀವು ಅದನ್ನು ಸ್ವೀಕರಿಸಿ ಅದರೊಂದಿಗೆ ಬದುಕಿ ಎಂದರು.
ಕಳೆದ ಎರಡು ವರ್ಷಗಳಿಂದ ತಮನ್ನಾ ಹಾಗೂ ವಿಜಯ್ ವರ್ಮಾ ಡೇಟಿಂಗ್‌ನಲ್ಲಿದ್ದರು. ಆದರೆ ಈಚೆಗೆ ಈ ಜೋಡಿ ಮಧ್ಯೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಹರಿದಾಡಿದೆ. ಅವರಿಬ್ಬರೂ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಧಿಕೃತವಾಗಿ ವಿಘಟನೆಯ ಬಗ್ಗೆ ಮಾತನಾಡಿಲ್ಲವಾದರೂ, ವದಂತಿಗಳು ಹರಡುತ್ತಿವೆ.