Publish Date: Mon, 14 Mar 2022 (09:50 IST)
Updated Date: Mon, 14 Mar 2022 (10:10 IST)
ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಎರಡು ಬಾರಿ ವಿವಾಹವಾಗಿ ಎರಡೂ ಬಾರಿಯೂ ವಿಚ್ಛೇದನವಾಗಿದೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನನಗೆ, ಕಿರಣ್ ಗೆ ಪರಸ್ಪರ ಪ್ರೀತಿಯಿದೆ, ಗೌರವವಿದೆ. ನಮ್ಮ ಸಂಬಂಧ ಬೇರೆಯವರಿಗೆ ಅರ್ಥವಾಗಲ್ಲ. ವಿಚ್ಛೇದನವಾದರೂ ನಾವು ಕುಟುಂಬದವರ ಹಾಗೆಯೇ ಇದ್ದೇವೆ ಎಂದಿದ್ದಾರೆ.
ಇನ್ನು, ಮೊದಲ ಪತ್ನಿ ರೀನಾ ಬಗ್ಗೆಯೂ ಮಾತನಾಡಿದ್ದು, ನಾನು ರೀನಾ ಒಟ್ಟಿಗೇ ಬೆಳೆದವರು. ನಂತರ ಚಿಕ್ಕ ವಯಸ್ಸಿನಲ್ಲೇ ಮದುವೆಯಾದೆವು. ಪರಸ್ಪರ ಬೇರೆಯಾದರೂ ನಾವು ಜೊತೆಯಾಗಿಯೇ ಇದ್ದೇವೆ ಎಂದು ಅಮೀರ್ ಹೇಳಿಕೊಂಡಿದ್ದಾರೆ.