Publish Date: Mon, 14 Mar 2022 (09:10 IST)
Updated Date: Mon, 14 Mar 2022 (09:41 IST)
ಮುಂಬೈ: ಬಾಡಿ ಶೇಮ್ ಬಗ್ಗೆ ನಟಿಯರು ಆಗಾಗ್ಗ ಮಾತಾಡುತ್ತಲೇ ಇರುತ್ತಾರೆ. ಇದೀಗ ನಟಿ ಸಯಂತನಿ ಘೋಷ್ ತಮ್ಮ ಸ್ತನದ ಗಾತ್ರದ ವಿಚಾರಕ್ಕೆ ಮಹಿಳೆಯೊಬ್ಬರಿಂದಲೇ ಟ್ರೋಲ್ ಆದ ಘಟನೆಯನ್ನು ವಿವರಿಸಿದ್ದಾರೆ.
ಸಂದರ್ಶನವೊಂದರಲ್ಲಿ ತಾವು ತಮ್ಮ ದೇಹದ ವಿಚಾರಕ್ಕೆ ಅನುಭವಿಸಿದ ಕಿರಿ ಕಿರಿಗಳ ಬಗ್ಗೆ ನಟಿ ಮುಕ್ತವಾಗಿ ಮಾತನಾಡಿದ್ದಾರೆ.
ಮಹಿಳೆಯೊಬ್ಬರು ನನ್ನ ಸ್ತನದ ಗಾತ್ರ ನೋಡಿ ನಿಮ್ಮ ಸ್ತನಗಳು ಚಪ್ಪಟೆಯಾಗಿಲ್ಲ. ಅಂದರೆ ನೀವು ಸಾಕಷ್ಟು ಸೆಕ್ಸ್ ಮಾಡುತ್ತಿರಬೇಕು ಎಂದು ನೇರವಾಗಿ ಮುಜುಗರವುಂಟು ಮಾಡಿದ್ದರು ಎಂದು ಸಯಂತನಿ ಹೇಳಿದ್ದಾರೆ. ಇನ್ನು, ಅವಕಾಶ ಕೊಡುವ ನೆಪದಲ್ಲಿ ನಿರ್ಮಾಪಕರೊಬ್ಬರು ತನ್ನನ್ನು ಜೊತೆಗೆ ಸಮಯ ಕಳೆಯುವಂತೆ ಕರೆದಿದ್ದ ಎಂದೂ ನಟಿ ಹೇಳಿಕೊಂಡಿದ್ದಾರೆ.