ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಗೆ ಇದೀಗ ತಮ್ಮ 60 ನೇ ವಯಸ್ಸಿಗೆ ಕಾಲಿಟ್ಟಿದ್ದು, ಇದೇ ಸಂದರ್ಭದಲ್ಲಿ ಅವರ ಮೂರನೇ ಲವ್ ವಿಚಾರ ಹೊರಬಿದ್ದಿದೆ. ಬೆಂಗಳೂರು ಹುಡುಗಿ ಜೊತೆ ಅಮೀರ್ ರಿಲೇಷನ್ ಶಿಪ್ ವಿಷಯ ಬಹಿರಂಗವಾಗುತ್ತಿದ್ದಂತೇ ಈತ ಮಿಸ್ಟರ್ ಪರ್ಫೆಕ್ಟ್ ಹೇಗಾಗ್ತಾನೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಅಮೀರ್ ಖಾನ್ ಗೆ ಮಿಸ್ಟರ್ ಪರ್ಫೆಕ್ಟ್ ಎನ್ನುವ ಹೆಸರಿದೆ. ಅವರ ಸಿನಿಮಾಗಳಿಂದ ಅವರಿಗೆ ಅಂತಹದ್ದೊಂದು ಬಿರುದು ಬಂದಿದೆ. ಆದರೆ ಈಗ ಅಮೀರ್ ಮೂರನೇ ಮದುವೆಗೆ ರೆಡಿಯಾಗಿರುವುದನ್ನು ನೋಡಿ ಈತ ಮಿಸ್ಟರ್ ಪರ್ಫೆಕ್ಟ್ ಆಗಲು ಸಾಧ್ಯವೇ ಇಲ್ಲ. ಆ ಪದಕ್ಕೆ ಇವರಿಗೆ ಯೋಗ್ಯತೆ ಇಲ್ಲ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ಮೊದಲ ಪತ್ನಿ ರೀನಾ ದತ್ತಾ ಜೊತೆ 16 ವರ್ಷ ದಾಂಪತ್ಯ ನಡೆಸಿ ಬಳಿಕ ವಿಚ್ಛೇದನ ನೀಡಿದ್ದರು. ಇದಾದ ಬಳಿಕ ತಮ್ಮ ಜೊತೆ ಲಗಾನ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ಬೆಂಗಳೂರು ಮೂಲದ ಕಿರಣ್ ರಾವ್ ರನ್ನು 2005 ರಲ್ಲಿ ಮದುವೆಯಾದರು. 2021 ರಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡರು.
ಇದೀಗ ಅಮೀರ್ ಮೂರನೇ ಬಾರಿ ರಿಲೇಷನ್ ಶಿಪ್ ನಲ್ಲಿದ್ದಾರೆ. ಬೆಂಗಳೂರು ಮೂಲದ ಫ್ಯಾಷನ್ ಡಿಸೈನರ್, ಮುಂಬೈನಲ್ಲಿ ತಮ್ಮದೇ ಸಲೂನ್ ಹೊಂದಿರುವ ಗೌರಿ ಎಂಬಾಕೆ ಜೊತೆ ಅಮೀರ್ ಕಳೆದ ಕೆಲವು ತಿಂಗಳಿನಿಂದ ಡೇಟಿಂಗ್ ಮಾಡುತ್ತಿದ್ದಾರೆ.
ಅಮೀರ್ ಮೂರನೇ ಹುಡುಗಿಯ ವಿಚಾರ ತಿಳಿದು ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇವರಿಗೆ ಯಾವಾಗಲೂ ಹಿಂದೂ ಹುಡುಗಿಯನ್ನು ಮದುವೆಯಾಗುವುದು ವಿಚ್ಛೇದನ ನೀಡುವುದು ಫ್ಯಾಶನ್ ಆಗಿದೆ. ಈ ಇಳಿವಯಸ್ಸಿನಲ್ಲೂ ಚಿಕ್ಕ ವಯಸ್ಸಿನ ಹುಡುಗಿ ಜೊತೆ ಮೂರನೇ ಸಂಬಂಧದಲ್ಲಿರುವ ಇವರು ಮಿಸ್ಟರ್ ಪರ್ಫೆಕ್ಟ್ ಹೇಗೆ ಆಗಲು ಸಾಧ್ಯ ಎಂದು ಟ್ರೋಲ್ ಮಾಡಿದ್ದಾರೆ.