Webdunia - Bharat's app for daily news and videos

Install App

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

Krishnaveni K
ಗುರುವಾರ, 13 ಮಾರ್ಚ್ 2025 (09:27 IST)
Photo Credit: X
ಬೆಂಗಳೂರು: ಬಣ್ಣದ ಓಕುಳಿ ಆಡುವ ಹೋಳಿ ಹಬ್ಬ ಮತ್ತೆ ಬಂದಿದೆ. ಇಂದು ಮತ್ತು ನಾಳೆ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದರ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್.

ಹಿಂದೂ ಹಬ್ಬಗಳ ಪೈಕಿ ಹೋಳಿ ಹಬ್ಬಕ್ಕೆ ವಿಶೇಷವಾದ ಸ್ಥಾನಮಾನವಿದೆ. ಜಾತಿ ಧರ್ಮ-ಬೇಧವಿಲ್ಲದೇ ಪರಸ್ಪರ ಬಣ್ಣದ ಓಕುಳಿ ಆಡಿ ಸಂಭ್ರಮಿಸುವ ಹಬ್ಬವಿದು. ಈ ಹಬ್ಬ ಉತ್ತರ ಭಾರತೀಯರಿಗೆ ವಿಶೇಷವಾಗಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ದಕ್ಷಿಣ ಭಾರತೀಯರೂ ಈ ಹಬ್ಬವನ್ನು ಅಷ್ಟೇ ಸಂಭ್ರಮದಿಂದ ಆಚರಿಸುತ್ತಾರೆ.

ಹೋಳಿ ಹಬ್ಬದ ಮುಹೂರ್ತ:
ಮಾರ್ಚ್ 13 ರಂದು ರಾತ್ರಿ 11.26 ಕ್ಕೆ ಹೋಳಿ ದಹನ ಮುಹೂರ್ತ ಆರಂಭವಾಗುತ್ತದೆ. ಇದು ಮಾರ್ಚ್ 14 ರ ಬೆಳಿಗ್ಗೆ 12.30 ರವರೆಗೂ ಇರುತ್ತದೆ. ಮಾರ್ಚ್ 13 ರಂದ 10.35 ಕ್ಕೆ ಹುಣ್ಣಿಮೆ ಆರಂಭವಾಗಿ ಮಾರ್ಚ್ 14 ರ 12.23 ಕ್ಕೆ ಹುಣ್ಣಿಮೆ ತಿಥಿ ಮುಕ್ತಾಯವಾಗುತ್ತದೆ. ಈ ಕಾರಣಕ್ಕೆ ಈ ಬಾರಿ ಎರಡು ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ.  ಆದರೆ ಪ್ರಮುಖ ಆಚರಣೆಯ ದಿನವೆಂದರೆ ನಾಳೆಯಾಗಿದೆ.

ಹಿನ್ನಲೆ
ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದ ವಿಷ್ಣು ಭಕ್ತ ಎಂಬ ಕೋಪಕ್ಕೆ ತನ್ನ ತಂಗಿ ಹೋಲಿಕಾ ಸಹಾಯದಿಂದ ಆಕೆಯನ್ನು ಕೊಲ್ಲಲು ಯತ್ನಿಸುತ್ತಾನೆ. ಆಕೆಗೆ ಬೆಂಕಿಯಿಂದ ಸುಡದಂತೆ ವರವಿರುತ್ತದೆ. ಅದರಂತೆ ಆಕೆಯನ್ನು ಬಳಸಿ ಮಗನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆದರೆ ತನಗೆ ಸಿಕ್ಕ ವರವನ್ನು ಪಾಪಕೃತ್ಯಕ್ಕೆ ಬಳಸಿದ್ದರಿಂದ ಆಕೆಯ ವರ ನಿಷ್ಪಲವಾಗಿ ಆಕೆ ಸುಟ್ಟು ಬೂದಿಯಾಗುತ್ತಾಳೆ. ಇದೇ ಕಾರಣಕ್ಕೆ ಹೋಲಿ ಹಬ್ಬ ಆಚರಣೆಗೆ ಬಂತು ಎನ್ನಲಾಗಿದೆ. ಒಟ್ಟಿನಲ್ಲಿ ಒಳಿತಿನ ವಿರುದ್ಧ ಕೆಡುಕಿಗೆ ಗೆಲುವಾಗದು ಎಂಬುದನ್ನು ಸಾರುವುದೇ ಈ ಹಬ್ಬದ ವಿಶೇಷವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

Vaikunta Ekadashi: ವೈಕುಂಠ ಏಕಾದಶಿ ಮುಹೂರ್ತ, ಪೂಜಾ ಸಮಯ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments