ಜ್ಯೋತಿಷ್ಯ ಪ್ರಕಾರ ಚಂದ್ರಗ್ರಹಣ ಸಮಯದಲ್ಲಿ ಹೋಳಿ ಆಡಬಹುದೇ

Krishnaveni K
ಮಂಗಳವಾರ, 3 ಮಾರ್ಚ್ 2026 (09:05 IST)
ಬೆಂಗಳೂರು: ಇಂದು ಹೋಳಿ ಹಬ್ಬ. ಆದರೆ ಇದೇ ದಿನ ಕೇತುಗ್ರಸ್ತ ಚಂದ್ರಗ್ರಹಣವಾಗುತ್ತಿದೆ. ಹೀಗಾಗಿ ಇಂದು ಹೋಳಿ ಬಣ್ಣದೋಕುಳಿ ಆಡಬಹುದೇ ಎಂಬ ಅನುಮಾನ ಅನೇಕರಲ್ಲಿದೆ.

ಗ್ರಹಣ ಮತ್ತು ಹೋಳಿ ಹಬ್ಬ ಒಂದೇ ದಿನ ಬಂದಿರುವುದರಿಂದ ಅನೇಕರಿಗೆ ಹಬ್ಬ ಆಚರಿಸಬಹುದೇ ಎಂದು ಗೊಂದಲಗಳಿವೆ. ಜ್ಯೋತಿಷ್ಯದ ಪ್ರಕಾರ ಇಂದು ಬೆಳಿಗ್ಗೆಯಿಂದಲೇ ಸೂತಕದ ಕಾಲ ಶುರುವಾಗುತ್ತದೆ. ಗ್ರಹಣ ನಿಮಿತ್ತ ಈ ಸೂತಕದ ಕಾಲದಲ್ಲಿ ಯಾವುದೇ ಸಂಭ್ರಮಾಚರಣೆ, ಶುಭ ಕಾರ್ಯಗಳನ್ನು ಮಾಡುವಂತಿಲ್ಲ.

ಇಂದು ಸಂಜೆ 6.26 ರಿಂದ 6.46 ರವರೆಗೆ ಚಂದ್ರಗ್ರಹಣ ಗೋಚರವಾಗಲಿದೆ. ಹೀಗಾಗಿ ಈ ಸಮಯದಲ್ಲಿ ಯಾವುದೇ ಹಬ್ಬದ ಆಚರಣೆ, ಬಣ್ಣದ ಓಕುಳಿ ಆಡುವುದು ಸರಿಯಲ್ಲ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ. ಹಾಗಿದ್ದರೆ ಬಣ್ಣದ ನೀರಿನ ಆಟ ಯಾವಾಗ ಎಂಬುದಕ್ಕೆ ಇಲ್ಲಿದೆ ಉತ್ತರ.

ಇಂದಿನ ಬದಲು ನಾಳೆಯ ದಿನವನ್ನು ಬಣ್ಣದೋಕುಳಿ ಆಡಲು ನಿಗದಿಪಡಿಸಬಹುದು. ಹೋಳಿಕಾ ದಹನ ಸೇರಿದಂತೆ ಹೋಳಿ ಹಬ್ಬದ ದಿನ ಆಚರಿಸುವ ಎಲ್ಲಾ ಸಂಭ್ರಮಾಚರಣೆಗಳನ್ನು ನಾಳೆಗೆ ಇಟ್ಟುಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಶಿವರಾತ್ರಿಗೆ ಶಿವನಿಗೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ ಯಾವುದು

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಮುಂದಿನ ಸುದ್ದಿ
Show comments