ಬೆಂಗಳೂರು: ನಿನ್ನೆ ರಾತ್ರಿ ಸಂಭವಿಸಿದ ರಕ್ತ ಚಂದ್ರಗ್ರಹಣಕ್ಕೆ ಕೋಟ್ಯಾಂತರ ಜನ ಸಾಕ್ಷಿಯಾಗಿದ್ದಾರೆ. ಚಂದ್ರಗ್ರಹಣದ ಬಳಿಕ ಇಂದು ಯಾವ ದೇವರಿಗೆ ಪೂಜೆ ಸಲ್ಲಿಸಬೇಕು ನೋಡಿ.
ನಿನ್ನೆ ಚಂದ್ರಗ್ರಹಣದ ನಿಮಿತ್ತ ಮಧ್ಯಾಹ್ನದ ಬಳಿಕ ಬಹುತೇಕ ದೇವಾಲಯಗಳು ಭಕ್ತರಿಗೆ ಪ್ರವೇಶ ನಿರ್ಬಂಧ ಹೇರಿತ್ತು. ಮಧ್ಯಾಹ್ನದ ಬಳಿಕ ದೇವರಿಗೆ ಪೂಜೆ ಇರಲಿಲ್ಲ. ಇಂದು ಬೆಳಿಗ್ಗೆ ಎಲ್ಲಾ ದೇವಾಲಯಗಳಿಗೆ ಶುದ್ಧೀಕರಣ ನಡೆಸಿ, ಪುಣ್ಯಾಹದ ನಂತರ ಪೂಜೆ, ಅಭಿಷೇಕ ನಡೆಸಲಾಗುತ್ತಿದೆ.
ವಿಶೇಷವಾಗಿ ಚಂದ್ರಗ್ರಹಣದ ನಂತರ ಭಕ್ತರು ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಶಿವನ ಶಿರದಲ್ಲೇ ಚಂದ್ರನನ್ನು ಕಾಣಬಹುದಾಗಿದೆ. ಚಂದ್ರಗ್ರಹಣದಿಂದ ಬರಬಹುದಾದ ದೋಷ ನಿವಾರಣೆಗಾಗಿ ಇಂದು ಕ್ಷೀರಾಭಿಷೇಕ, ಜಲಾಭಿಷೇಕ, ಬಿಲ್ವ ಪತ್ರೆ ಪೂಜೆ ನಡೆಸಲಾಗುತ್ತಿದೆ.
ಇದಲ್ಲದೆ ಗಣೇಶನ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಬಹುದಾಗಿದೆ. ವಿಶೇಷವಾಗಿ ನವಗ್ರಹಗಳ ಪೂಜೆ ಮಾಡುವುದರಿಂದ ಗ್ರಹಣದಿಂದ ಉಂಟಾದ ಗ್ರಹಗತಿಗಳ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.