Select Your Language

Notifications

webdunia
webdunia
webdunia
webdunia

ಇಂದು ಚಂದ್ರಗ್ರಹಣ: ಕರ್ನಾಟಕದಲ್ಲಿ ಎಷ್ಟು ಹೊತ್ತು ಗೋಚರ, ಈ ರಾಶಿಗೆ ಲಾಭದಾಯಕ

Lunar eclipse
ಬೆಂಗಳೂರು: ಇಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಮೊದಲ ಗ್ರಹಣವಾಗಿದ್ದು ಭಾರತದಲ್ಲೂ ಗೋಚರವಾಗುತ್ತಿದೆ. ಎಷ್ಟು ಗಂಟೆಗೆ ನಮ್ಮ ರಾಜ್ಯದಲ್ಲಿ ಗೋಚರವಾಗುತ್ತದೆ, ಏನು ಮಾಡಬೇಕು ಇಲ್ಲಿದೆ ವಿವರ.

ಇಂದು ಹೋಳು ಹುಣ್ಣಿಮೆ ದಿನವೇ ಕೇತುಗ್ರಸ್ತ ಚಂದ್ರಗ್ರಹಣವಾಗುತ್ತಿರುವುದು ವಿಶೇಷವಾಗಿದೆ. ಕರ್ನಾಟಕದಲ್ಲಿ ಸಂಜೆ 6.26 ರಿಂದ 6.46 ರವರೆಗೆ ಗ್ರಹಣ ಗೋಚರವಾಗಲಿದೆ. ಶುಭ್ರ ಆಕಾಶವಿದ್ದಲ್ಲಿ ಇಂದು ಬರಿಗಣ್ಣಿನಿಂದ ಈ ಖಗೋಳ ವಿಸ್ಮಯವನ್ನು ನೋಡಬಹುದಾಗಿದೆ.

ಜ್ಯೋತಿಷ್ಯದ ಪ್ರಕಾರ ಗ್ರಹಣ ನಿಮಿತ್ತ ಇಂದು ಬೆಳಿಗ್ಗೆಯಿಂದಲೇ ಸೂತಕದ ಕಾಲ ಶುರುವಾಗುತ್ತದೆ. ಬಹುತೇಕ ದೇವಾಲಯಗಳು ಇಂದು ಮಧ್ಯಾಹ್ನವೇ ಬಾಗಿಲು ಮುಚ್ಚಲಿದ್ದು ರಾತ್ರಿ 7 ರ ನಂತರ ಬಾಗಿಲು ತೆಗೆಯಲಿದೆ. ಗ್ರಹಣ ಕಾರ್ಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿದೆ.

ಗ್ರಹಣದ ನಂತರ ಸ್ನಾನ ಮಾಡಿ ಶುದ್ಧರಾಗಿ ಆಹಾರ ಸೇವಿಸುವುದು ಸೂಕ್ತ. ವಿಶೇಷವಾಗಿ ಈ ಗ್ರಹಣ ಮೇಷ ರಾಶಿ ಮತ್ತು ಧನು ರಾಶಿಯವರಿಗೆ ಲಾಭದಾಯಕವಾಗಲಿದೆ. ಗ್ರಹಣದ ನಂತರ ಆರ್ಥಿಕವಾಗಿ, ವೃತ್ತಿ ಸಂಬಂಧವಾಗಿ ಲಾಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ದುರ್ಗಾದೇವಿಯ ಈ ಮಂತ್ರವನ್ನು ತಪ್ಪದೇ ಪಠಿಸಿ