Publish Date: Thu, 13 Dec 2018 (09:16 IST)
Updated Date: Thu, 13 Dec 2018 (09:18 IST)
ಬೆಂಗಳೂರು: ಬಾಲಗ್ರಹ ದೋಷವಿದ್ದರೆ ವಿದ್ಯಾಭ್ಯಾಸ, ಹಠಮಾರಿತನ ಮುಂತಾದ ಸಮಸ್ಯೆಗಳು ಇದ್ದೇ ಇರುತ್ತವೆ. ಬಾಲಗ್ರಹ ದೋಷವಿದ್ದರೆ ಪರಿಹಾರವೇನು ಗೊತ್ತಾ?
ಬಾಲಗ್ರಹ ದೋಷವಿದ್ದರೆ ಸುಬ್ರಹ್ಮಣ್ಯನ ಆರಾಧನೆ ಮಾಡಿದರೆ ಉತ್ತಮ. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ತುಪ್ಪದ ದೀಪದ ಆರತಿ ಮಾಡಿ. ಬಳಿಕ ಅಲ್ಲಿ ಕೊಡುವ ಮೃತ್ತಿಕಾ ಪ್ರಸಾದವನ್ನು ಪ್ರತಿನಿತ್ಯ ಮಕ್ಕಳಿಗೆ ಹಚ್ಚಿದರೆ ಮಗು ಆರೋಗ್ಯವಾಗಿರುತ್ತದೆ.
ಹಾಗೆಯೇ ಈ ರೀತಿ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗುವುದಲ್ಲದೆ, ಆಗಾಗ ಹುಷಾರು ತಪ್ಪುವುದು ತಪ್ಪುತ್ತದೆ. ಜ್ಞಾಪಕ ಶಕ್ತಿಯೂ ವೃದ್ಧಿಸಿ ಮಗು ಚೂಟಿಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ