Publish Date: Fri, 10 Aug 2018 (12:49 IST)
Updated Date: Fri, 10 Aug 2018 (12:52 IST)
ಬೆಂಗಳೂರು: ಮುಖದಲ್ಲಿ ನೆರಿಗೆ ಮೊಡವೆ, ಕಪ್ಪು ಕಲೆ ಇವುಗಳ ಸಮಸ್ಯೆ ಇದ್ದರೆ ಯಾವುದೇ ಕಾರ್ಯಕ್ರಮಕ್ಕೂ ಹೋಗುವುದಕ್ಕೂ ಮನಸ್ಸು ಆಗುವುದಿಲ್ಲ. ಇನ್ನು ಮೂವತ್ತು ದಾಟಿದ ಮೇಲಂತೂ ವಯಸ್ಸಾದವರಂತೆ ಕಾಣುತ್ತವೆ ಎಂಬ ಚಿಂತೆ ಕಾಡುತ್ತದೆ. ಇದಕ್ಕೆಲ್ಲಾ ಇದೇ ಒಂದು ಮನೆಮದ್ದು.
2 ದೊಡ್ಡ ಚಮಚ ಹೆಸರು ಕಾಳಿನ ಹಿಟ್ಟಿಗೆ ಸ್ವಲ್ಪ ಜೇನುತುಪ್ಪ, ಮೊಟ್ಟೆ ಬಿಳಿಲೋಳೆ ಹಾಗೂ ಲಿಂಬೆಹಣ್ಣಿನ ರಸ ಇವಿಷ್ಟು ಇದ್ದರೆ ಸಾಕು. ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮುಖವನ್ನು ತೊಳೆದು ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 15 ನಿಮಿಷದ ನಂತರ ಹದ ಬಿಸಿನೀರಿನಿಂದ ಮುಖ ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡಿದರೆ ಫಲಿತಾಂಶ ಸಿಗುತ್ತದೆ.
ಹೆಸರುಕಾಳಿನ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಚರ್ಮದ ರಂಧ್ರವನ್ನು ಆಳವಾಗಿ ಶುದ್ಧೀಕರಿಸಿ, ತ್ವಚೆಗೆ ಪೋಷಣೆ ನೀಡುವುದು. ಇದರಲ್ಲಿರುವ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣವೂ ಇದಕ್ಕಿದೆ. ಹಾಗಾಗಿ ಈ ಟಿಪ್ಸ್ ಫಾಲೋ ಮಾಡಿ ನಿಮ್ಮ ಸುಂದರವಾದ ಮುಖದ ಕಾಳಜಿ ವಹಿಸಿ.