Select Your Language

Notifications

webdunia
webdunia
webdunia
webdunia

ಮುಖ ನಳನಳಿಸಬೇಕಾದರೆ ಇದನ್ನು ಬಳಸಿ ನೋಡಿ

ಮುಖ ನಳನಳಿಸಬೇಕಾದರೆ ಇದನ್ನು ಬಳಸಿ ನೋಡಿ
ಬೆಂಗಳೂರು , ಮಂಗಳವಾರ, 7 ಆಗಸ್ಟ್ 2018 (08:36 IST)
ಬೆಂಗಳೂರು: ಹಾಗಾಲಕಾಯಿ ಎಂದರೆ ಮುಖ ಕಿವುಚುವವರೆ ಜಾಸ್ತಿ. ಇದನ್ನು ತಿಂದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕಹಿಯಾದ ಈ ಹಾಗಲಕಾಯಿ ಮುಖದ ಸೌಂದರ್ಯಕ್ಕೂ ತನ್ನದೇ ಆದ ಕೊಡುಗೆ ನೀಡಿದೆ. ಹಾಗಲಕಾಯಿಂದ ಹೊಳೆಯುವ  ಮುಖದ ಚರ್ಮ ಪಡೆಯಬಹುದಂತೆ.


ಹಾಗಲಕಾಯಿಯ ತುಂಡುಗಳನ್ನು ರುಬ್ಬಿ ಪೇಸ್ಟ್‌ ಮಾಡಿ. ಇದಕ್ಕೆ ಚಿಟಿಕೆ ಅರಶಿನ ಮತ್ತು ಒಂದು ಚಮಚ ಲೋಳೆಸರದ ರಸ ಹಾಕಿ ಮಿಶ್ರ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆದರೆ ತುರಿಕೆ ಕಡಿಮೆಯಾಗುತ್ತದೆಯಂತೆ.

ಹಾಗಲಕಾಯಿಯ ಜ್ಯೂಸ್‌ ಅನ್ನು ಮುಖಕ್ಕೆ ಸವರಿಕೊಳ್ಳಿ. ಐದು ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಪ್ರತಿ ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೆ ಹೊಳೆಯುವ ಚರ್ಮ ಪಡೆಯಬಹುದಂತೆ.

ಚರ್ಮದ ಸೆಕೆ ಬೊಕ್ಕೆಗಳ ನಿವಾರಣೆಗೆ ಸ್ವಲ್ಪ ಹಾಗಲಕಾಯಿಯ ತುಂಡುಗಳನ್ನು ನೀರಿನಲ್ಲಿ ಬೇಯಿಸಿ. ನೀರು ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುವಾಗ ಕುದಿಸುವುದನ್ನು ನಿಲ್ಲಿಸಿ, ನೀರು ತಣ್ಣಗಾಗಲು ಬಿಡಿ. ಈ ನೀರಿನಲ್ಲಿ ಹತ್ತಿ ಉಂಡೆಯನ್ನು ಅದಿದ ಮುಖಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಲೈಂಗಿಕ ಜೀವನ ಸುಖಮಯವಾಗಬೇಕಾದರೆ ಇವುಗಳನ್ನು ತಿನ್ನಿ