Select Your Language

Notifications

webdunia
webdunia
webdunia
webdunia

ಬಿಸಿಲಿನಿಂದ ಕಪ್ಪಾಗಿರುವ ನಿಮ್ಮ ತ್ವಚೆಗೆ ಬಾದಾಮಿಯಲ್ಲಿದೆ ಅದ್ಭುತ ಪರಿಹಾರ

ಬಿಸಿಲಿನಿಂದ ಕಪ್ಪಾಗಿರುವ ನಿಮ್ಮ ತ್ವಚೆಗೆ ಬಾದಾಮಿಯಲ್ಲಿದೆ ಅದ್ಭುತ ಪರಿಹಾರ
ಬೆಂಗಳೂರು , ಶುಕ್ರವಾರ, 24 ಸೆಪ್ಟಂಬರ್ 2021 (09:41 IST)
ನಿಮ್ಮ ದೈನಂದಿನ ಆಹಾರದಲ್ಲಿ ನೀವು ಹಣ್ಣು, ತರಕಾರಿ ಸೇವನೆಯ ಜೊತೆಗೆ 1.5 ಔನ್ಸ್‌ಗಳಷ್ಟು ಬಾದಾಮಿ ಸೇವನೆ ರೂಢಿಸಿಕೊಳ್ಳಬೇಕು. ಬಾದಾಮಿ ಸೇವನೆಯು ನಿಮ್ಮ ತ್ವಚೆಯ ರಕ್ಷಣೆಗೆ ಸಹಕಾರಿಯಾಗಿದ್ದು ಸೂರ್ಯನಿಂದ ಪ್ರಖರ ಬಿಸಿಲಿನಿಂದ ನಿಮ್ಮನ್ನು ಕಾಪಾಡುತ್ತದೆ.

ಸೂರ್ಯನ ನೇರಳಾತೀತ ಕಿರಣಗಳಿಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು ಚರ್ಮದ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುತ್ತವೆ. ತೀವ್ರ ಬಿಸಿಲು ತ್ವಚೆಯಲ್ಲಿನ ಮುಕ್ತ ರ್ಯಾಡಿಕಲ್ಗಳನ್ನು ಸಕ್ರಿಯಗೊಳಿಸಬಹುದು ಹೀಗಾಗಿ ತ್ವಚೆಯು ಸುಕ್ಕುಗಟ್ಟುತ್ತದೆ ಮತ್ತು ಇದರಿಂದ ವಯಸ್ಸಾದಂತೆ ಕಾಣುತ್ತದೆ. ನಿಧಾನವಾಗಿ ಚರ್ಮದ ಕ್ಯಾನ್ಸರ್ಗೆ ಕಾರಣವಾಗಲಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಬಿಸಿಲಿನ ಝಳಕ್ಕೆ ನೀವು ಸನ್ಸ್ಕ್ರೀನ್ ಲೋಶನ್ ಹಾಗೂ ಇತರ ಸೌಂದರ್ಯವರ್ಧಕಗಳನ್ನು ಹಚ್ಚಿಕೊಂಡರೂ ನೀವು ಸೇವಿಸುವ ಆಹಾರದಲ್ಲಿರುವ ಕೆಲವೊಂದು ಅಂಶಗಳು ತ್ವಚೆಗೆ ಬಿಸಿಲಿನಿಂದ ಉಂಟಾಗುವ ಹಾನಿಯನ್ನು ತಡೆಗಟ್ಟುತ್ತದೆ.
ಸೂರ್ಯನ ಅಲ್ಟ್ರಾ ವೈಲಟ್ ಕಿರಣಗಳಿಂದ ತ್ವಚೆಯು ಆ್ಯಕ್ಸಿಡೇಟ್ ಒತ್ತಡ ಉಂಟುಮಾಡುತ್ತದೆ. ಇದರಿಂದ ಚರ್ಮದ ಉರಿಯೂತ ಕಾಣಿಸುತ್ತದೆ. ಈ ಸಮಯದಲ್ಲಿ ನಾವು ಸೂರ್ಯನ ಈ ಪರಿಣಾಮಕಾರಿ ಕಿರಣಗಳಿಂದ ತ್ವಚೆಯನ್ನು ಸಂರಕ್ಷಿಸುವ ಆಹಾರಗಳತ್ತ ಗಮನಹರಿಸಬೇಕಾಗುತ್ತದೆ. ನಿರ್ದಿಷ್ಟ ಹಣ್ಣು, ತರಕಾರಿ ಹಾಗೂ ಒಣಹಣ್ಣುಗಳಲ್ಲಿ ಬಾದಾಮಿ ಸೇವಿಸುವುದು ಅತಿಮುಖ್ಯವಾಗಿದೆ. ಇದು ನಿಮ್ಮ ತ್ವಚೆಗೆ ಹೊರಗಿನಿಂದ ಹಾಗೂ ಒಳಗಿನಿಂದ ಸಂರಕ್ಷಣೆ ನೀಡುತ್ತದೆ.
ಸೂರ್ಯನ ಪ್ರಖರ ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳುವುದು ಹೇಗೆ?
ದೀರ್ಘಕಾಲದ ಸೂರ್ಯನ ಬೆಳಕನ್ನು ತಪ್ಪಿಸಿಕೊಳ್ಳುವುದು, ರಕ್ಷಣಾತ್ಮಕ ಉಡುಪುಗಳ ಬಳಕೆ ಹಾಗೂ ತ್ವಚೆಗೆ ಸನ್ಸ್ಕ್ರೀನ್ ಲೋಶನ್ಗಳನ್ನು ಬಳಸುವುದು ಫೋಟೋ ಡ್ಯಾಮೇಜ್ನಿಂದ ತ್ವಚೆಯನ್ನು ರಕ್ಷಿಸುತ್ತದೆ. ಇದರ ಜೊತೆಗೆ ಅಧ್ಯಯನಕಾರರು ತಿಳಿಸಿರುವಂತೆ ನಾವು ಸೇವಿಸುವ ಆಹಾರ ಕೂಡ ರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಆಲ್ಫಾ-ಟೊಕೊಫೆರಾಲ್ನ ಉತ್ತಮ ಮೂಲವೆಂದು ಕರೆಯಲ್ಪಡುವ ಬಾದಾಮಿ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ನೈಸರ್ಗಿಕ ಮೂಲಗಳಲ್ಲಿ ಒಂದಾಗಿದೆ. ಸೂರ್ಯನ ಬೆಳಕು ಹಾಗೂ ಯುವಿ ಕಿರಣಗಳಿಂದ ತ್ವಚೆ ಸಂರಕ್ಷಿಸಿ ಆರೋಗ್ಯಕರವಾಗಿ ಮಾಡುತ್ತದೆ. ಬಾದಾಮಿಯು ಯಥೇಚ್ಛ ಕೊಬ್ಬುಗಳನ್ನು ಒಳಗೊಂಡಿರುವುದರಿಂದ ಈ ಎರಡರ ಸಂಯೋಜನೆಯಿಂದ ತ್ವಚೆಯ ಸುಕ್ಕುಗಟ್ಟುವಿಕೆ ತಡೆಯುತ್ತದೆ.
ಬಾದಾಮಿ ಸೇವನೆಯಿಂದ ಉಂಟಾಗುವ ಪ್ರಯೋಜನಗಳೇನು?
webdunia

ಜರ್ನಲ್ ಆಫ್ ಕಾಸ್ಮೆಟಿಕ್ ಡರ್ಮಟಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಬಾದಾಮಿ ಸೇವನೆಯ ಮಹತ್ತರ ಪ್ರಯೋಜನ ತಿಳಿಸಿದ್ದು ಬಾದಾಮಿ ಸೇವನೆಯಿಂದ UVBಗೆ (ಸನ್ಬರ್ನ್) ಬೆಳಕಿಗೆ ಚರ್ಮದ ಪ್ರತಿರೋಧವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ 42 ಗ್ರಾಮ್ಗಳಷ್ಟು ಬಾದಾಮಿ ಸೇವನೆಯು UVBಗೆ ಪ್ರತಿರೋಧವನ್ನು ಸುಧಾರಿಸುತ್ತದೆ.
ನಿಮ್ಮ ದೈನಂದಿನ ಆಹಾರದಲ್ಲಿ ನೀವು ಹಣ್ಣು, ತರಕಾರಿ ಸೇವನೆಯ ಜೊತೆಗೆ 1.5 ಔನ್ಸ್ಗಳಷ್ಟು ಬಾದಾಮಿ ಸೇವನೆ ರೂಢಿಸಿಕೊಳ್ಳಬೇಕು. ಬಾದಾಮಿ ಸೇವನೆಯು ನಿಮ್ಮ ತ್ವಚೆಯ ರಕ್ಷಣೆಗೆ ಸಹಕಾರಿಯಾಗಿದ್ದು ಸೂರ್ಯನಿಂದ ಪ್ರಖರ ಬಿಸಿಲಿನಿಂದ ನಿಮ್ಮನ್ನು ಕಾಪಾಡುತ್ತದೆ. ಬಾದಾಮಿ ಎಣ್ಣೆ ಹಾಗೂ ಬಾದಾಮಿ ಪದರವು UVBಗೆ - ಪ್ರೇರಿತ ಫೋಟೋಜಿಂಗ್ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಮಹಿಳೆಯರು ಹೆಚ್ಚು ಬಾದಾಮಿ ತಿನ್ನಬೇಕು ಏಕೆ?
ಹೆಚ್ಚಿನ ಮಹಿಳೆಯರು ತ್ವಚೆಯನ್ನು UVBಗೆ ಒಡ್ಡಿಕೊಳ್ಳದಂತೆ ತ್ವಚೆಯ ಸಂರಕ್ಷಣೆ ಮಾಡುತ್ತಿದ್ದರೂ ದೈನಂದಿನ ಆಹಾರದಲ್ಲಿ ಬಾದಾಮಿ ಸೇರಿಸುವುದು ಹಾಗೂ ಸೇವಿಸುವುದು ಅತಿಮುಖ್ಯ ಎಂದೆನಿಸಿದೆ. ತ್ವಚೆಯನ್ನು ಬಾಹ್ಯ ಹಾಗೂ ಆಂತರ್ಯದಿಂದ ಸಂರಕ್ಷಿಸಲು ಬಾದಾಮಿ ನೆರವನ್ನೀಯುತ್ತದೆ. ಮಹಿಳೆಯರು ಬಾದಾಮಿ ಸೇವನೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಆರೋಗ್ಯಕರ ಮೈಕಾಂತಿಯನ್ನು ಪಡೆದುಕೊಳ್ಳಲು ಮುಷ್ಟಿಯಷ್ಟು ಬಾದಾಮಿಯನ್ನು ಸೇವಿಸಬೇಕು ಎಂಬುದಾಗಿ ಸೌಂದರ್ಯತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣುಗಳ ಸುತ್ತಿನ ಡಾರ್ಕ್ ಸರ್ಕಲ್ ನಿಮ್ಮ ಅಂದ ಹಾಳು ಮಾಡುತ್ತಿದ್ದರೆ, ಈ ಟಿಪ್ಸ್ ಫಾಲೋ ಮಾಡಿ