Select Your Language

Notifications

webdunia
webdunia
webdunia
webdunia

ಆರೋಗ್ಯಕರ ತ್ವಚೆಗಾಗಿ ಪಾಲಿಸಬೇಕಾದ ಆಹಾರ ಕ್ರಮದ ವಿವರ ಇಲ್ಲಿದೆ..!

ಆರೋಗ್ಯಕರ ತ್ವಚೆಗಾಗಿ ಪಾಲಿಸಬೇಕಾದ ಆಹಾರ ಕ್ರಮದ ವಿವರ ಇಲ್ಲಿದೆ..!
ಬೆಂಗಳೂರು , ಶುಕ್ರವಾರ, 3 ಸೆಪ್ಟಂಬರ್ 2021 (07:00 IST)
ತ್ವಚೆಗೆ ಬಾಹ್ಯವಾಗಿ ಎಷ್ಟೇ ಕಾಳಜಿ ಮಾಡಿದರೂ, ದೇಹಕ್ಕೆ ಅಗತ್ಯ ಜೀವಸತ್ವಗಳ ಪೂರೈಕೆ ಆದಾಗ ಮಾತ್ರ ಫಲಿತಾಂಶ ಚೆನ್ನಾಗಿ ಬರಲು ಸಾಧ್ಯ. ಹೀಗಾಗಿಯೇ ಬೇಸಿಗೆಯಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳು ಏನೆಲ್ಲ ಸೇವಿಸಬೇಕೆಂಬ ಮಾಹಿತಿ ಇಲ್ಲಿದೆ.

ಸೌಂದರ್ಯವನ್ನು ಕಾಪಾಡಿಕೊಳ್ಳಲು ತ್ವಚೆಯ ಆರೈಕೆ ಮುಖ್ಯ. ಆಯಾ ಕಾಲಕ್ಕೆ ತಕ್ಕಂಯೆ ತ್ವಚೆಯ ಆರೈಕೆ ಮಾಡದಿದ್ದರೆ ಇಲ್ಲ ಸಲ್ಲದ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಬೇಸಿಗೆಯಲ್ಲಿ ಕೊಂಚ ಹೆಚ್ಚಾಗಿಯೇ ತ್ವಚೆಯ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಬಿಸಿಲಿನ ದಗೆಯಿಂದ ಚರ್ಮದ ನಾನಾ ರೀತಿಯ ಸಮಸ್ಯೆಗಳು ಕಾಡಲಾರಂಭಿಸುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಎಂದಿಗಿಂತ ಚರ್ಮವನ್ನು ಪೋಷಿಸುವ ಜೀವಸತ್ವಗಳಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ದೇಹದಲ್ಲಿ ಜೀವಸತ್ವಗಳ ಕೊರತೆಯಿದ್ದರೆ, ಮುಖದ ಮೇಲೆ ಕಪ್ಪು ಕಲೆಗಳು, ಸುಕ್ಕು ಗಟ್ಟುವ ಸಮಸ್ಯೆಗಳ ಜತೆಗೆ ಇತರೆ ಚರ್ಮದ ಸಮಸ್ಯೆಗಳು ಕಾಣಿಸುತ್ತವೆ. ಇದನ್ನು ಹೋಗಲಾಡಿಸಲು ನಾವು ಸೇವಿಸುವ ದೈನಂದಿನ ಆಹಾರ ಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಂಡರೆ ಸಾಕು.
ತ್ವಚೆಗೆ ಬಾಹ್ಯವಾಗಿ ಎಷ್ಟೇ ಕಾಳಜಿ ಮಾಡಿದರೂ, ದೇಹಕ್ಕೆ ಅಗತ್ಯ ಜೀವಸತ್ವಗಳ ಪೂರೈಕೆ ಆದಾಗ ಮಾತ್ರ ಫಲಿತಾಂಶ ಚೆನ್ನಾಗಿ ಬರಲು ಸಾಧ್ಯ. ಹೀಗಾಗಿಯೇ ಬೇಸಿಗೆಯಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳು ಏನೆಲ್ಲ ಸೇವಿಸಬೇಕೆಂಬ ಮಾಹಿತಿ ಇಲ್ಲಿದೆ.
webdunia

ವಿಟಮಿನ್ ಎ:  ಇದು ಹೊಸ ಚರ್ಮದ ಕೋಶಗಳ ಉತ್ಪಾದನೆಯನ್ನು ಉತ್ತೇಜಿಸುವ ಜೀವಸತ್ವ. ಇದನ್ನು ರೆಟಿನಾಲ್ ಎಂದೂ ಕರೆಯಲಾಗುತ್ತದೆ. ಮೊಡವೆ ಮತ್ತು ಚರ್ಮದ ಸುಕ್ಕುಗಳು ಮತ್ತು ರೇಖೆಗಳ ರಚನೆಯಂತಹ ವಯಸ್ಸು ಹೆಚ್ಚಾದಂತೆ ತೋರಿಸುವ ಚಿಹ್ನೆಗಳನ್ನು ಹೋಗಲಾಡಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ.
ವಿಟಮಿನ್ ಹೊಂದಿರುವ ಆಹಾರ: ಕ್ಯಾರೆಟ್, ಸಿಹಿ ಆಲೂಗಡ್ಡೆ, ಮೊಟ್ಟೆ, ಡೈರಿ ಉತ್ಪನ್ನಗಳು ಮತ್ತು ಪಾಲಕನಂತಹ ಆಹಾರಗಳಲ್ಲಿ ವಿಟಮಿನ್ ಎ ನೈಸರ್ಗಿಕವಾಗಿ ಹೇರಳವಾಗಿರುತ್ತವೆ. ಇವುಗಳನ್ನು ಆಹಾರ ಪದಾರ್ಥದಲ್ಲಿ ಹೆಚ್ಚಿಸುವ ಮೂಲಕ ತ್ವಚ್ಛೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
ವಿಟಮಿನ್ ಬಿ 3: ನಿಯಾಸಿನಮೈಡ್ ಅಥವಾ ನಿಕೋಟಿನಮೈಡ್ ಒಂದು ರೀತಿಯ ವಿಟಮಿನ್ ಬಿ 3 ಜೀವಸತ್ವವಾಗಿದೆ. ಇದು ಉತ್ತಮ ಆರೋಗ್ಯವನ್ನು ಕಾಪಾಡುವ ಎಂಟು ಜೀವಸತ್ವಗಳಲ್ಲಿ ಒಂದಾಗಿದೆ. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು ಅದರ ವಿರೋಧಿ ಗುಣಗಳಿಗೆ ಹೆಸರುವಾಸಿಯಾಗಿದೆ. ಮೊಡವೆ, ಕಲೆಗಳು, ಹೈಪರ್ ಪಿಗ್ಮೆಂಟೇಶನ್ ಮತ್ತು ರೊಸಾಸಿಯದಂತಹ ಚರ್ಮ ರೋಗಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
 ವಿಟಮಿನ್ ಬಿ 3 ಹೊಂದಿರುವ ಆಹಾರ: ಚಿಕನ್ ಬ್ರೆಸ್ಟ್, ಟ್ಯೂನ, ಸಾಲ್ಮನ್, ಕಡಲೆಕಾಯಿ, ಹಸಿರು ಬಟಾಣಿ, ಅಣಬೆಗಳು ಮತ್ತು ಆಲೂಗಡ್ಡೆ ವಿಟಮಿನ್ ಬಿ 3 ಸಮೃದ್ಧವಾಗಿರುವ ಕೆಲವು ಆಹಾರಗಳು.
ವಿಟಮಿನ್ ಸಿ: ವಿಟಮಿನ್ ಸಿ ಯ ಆ್ಯಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿರುವ ಜೀವಸತ್ವ. ಮೊಡವೆಗಳ ಸಮಸ್ಯೆ ದೂರ ಮಾಡಲು ಮತ್ತು ಕಾಲಜನ್ ರಚನೆಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಾಕಷ್ಟು ವಿಟಮಿನ್ ಸಿ ತೆಗೆದುಕೊಳ್ಳುವುದರಿಂದ ಚರ್ಮದ ಸಮಸ್ಯೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ವಿಟಮಿನ್ ಸಿ ಹೊಂದಿರುವ ಆಹಾರ: ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿಗಳು, ಟೊಮ್ಯಾಟೊ, ಮಾವಿನಹಣ್ಣು, ಬೆಲ್ ಪೆಪ್ಪರ್, ಕೋಸುಗಡ್ಡೆ ಮತ್ತು ಬ್ರಸೆಲ್ಸ್ ಮೊಗ್ಗುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತವೆ.
ವಿಟಮಿನ್ ಇ: ಈ ವಿಟಮಿನ್ ಅನ್ನು ಟೋಕೋಫೆರಾಲ್ ಎಂದೂ ಕರೆಯುತ್ತಾರೆ. ವಿಟಮಿನ್ ಇ ಶಕ್ತಿಯುತವಾದ ಆ್ಯಂಟಿ-ಆಕ್ಸಿಡೆಂಟ್ ಆಗಿದ್ದು ಅದು ಚರ್ಮವನ್ನು ಕಾಲಜನ್ ರಾಡಿಕಲ್ಗಳಿಂದ ರಕ್ಷಿಸುತ್ತದೆ. ಈ ಕಣಗಳು ಆಂತರಿಕ ಮತ್ತು ಬಾಹ್ಯ ಅಂಶಗಳಿಂದ ಉತ್ಪಾದಿಸಲ್ಪಡುತ್ತದೆ.
ವಿಟಮಿನ್ ಹೊಂದಿರುವ ಆಹಾರ: ನೈಸರ್ಗಿಕವಾಗಿ ವಿಟಮಿನ್ ಇ ಸಿಗುವ ಆಹಾರಗಳೆಂದರೆ ಬಾದಾಮಿ, ಹ್ಯಾಝೆಲ್ ನೆಟ್, ಸೂರ್ಯಕಾಂತಿ ಬೀಜಗಳು, ಆಲಿವ್ ಎಣ್ಣೆ, ಪಾಲಕ, ಜೋಳ ಮತ್ತು ಮಾವಿನ ಹಣ್ಣಗಳು.


Share this Story:

Follow Webdunia kannada

ಮುಂದಿನ ಸುದ್ದಿ

ಈ ಆಯುರ್ವೇದ ಗಿಡಮೂಲಿಕೆಯ ಆರೋಗ್ಯ ಪ್ರಯೋಜನಗಳು ಒಂದೆರೆಡಲ್ಲ..