Publish Date: Mon, 05 Mar 2018 (08:45 IST)
Updated Date: Mon, 05 Mar 2018 (08:47 IST)
ಬೆಂಗಳೂರು: ತುಟಿ ಒಡೆಯುವುದಕ್ಕೆ ಹೆಚ್ಚಾಗಿ ನಾವು ಮಾಡುವ ಮನೆ ಮದ್ದು ಎಂದರೆ ಲಿಪ್ ಬಾಮ್, ಲಿಪ್ ಕೇರ್ ನಂತಹ ಜೆಲ್ ಹಚ್ಚಿಕೊಳ್ಳುವುದು. ಅದನ್ನು ಹಾಕಿ ಪ್ರಯೋಜನ ಕಾಣದೇ ಹೋಗಿದ್ದಲ್ಲಿ ಇನ್ನೊಂದು ಮನೆ ಮದ್ದು ಮಾಡಿ ನೋಡಬಹುದು.
ಅದಕ್ಕೆ ಬೇಕಾಗಿರುವುದು ಪಪ್ಪಾಯ ಹಣ್ಣು. ಸಾಕಷ್ಟು ಪಪ್ಪಾಯ ಸೇವಿಸಬೇಕು ಅಥವಾ ಇದರ ಪೇಸ್ಟ್ ಮಾಡಿಕೊಂಡು ತುಟಿಗಳಿಗೆ ಹಚ್ಚಿಕೊಂಡು 15 ನಿಮಿಷ ಬಿಡಿ. ಹೀಗೇ ನಿಯಮಿತವಾಗಿ ಮಾಡುತ್ತಿದ್ದರೆ ತುಟಿ ಒಡೆಯುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಆದಷ್ಟು ನೀರು ಸೇವಿಸಿ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಿ. ಹಾಗೇ ಹೆಚ್ಚು ಖಾರವಿರುವ ಆಹಾರವನ್ನೂ ಅವಾಯ್ಡ್ ಮಾಡಿದರೆ ಈ ಸಮಸ್ಯೆಗೆ ತಕ್ಕ ಮಟ್ಟಿನ ಮುಕ್ತಿ ಸಿಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ