Publish Date: Mon, 05 Mar 2018 (08:03 IST)
Updated Date: Mon, 05 Mar 2018 (08:06 IST)
ಬೆಂಗಳೂರು: ಪಪ್ಪಾಯ ಹಣ್ಣು ದೇಹಕ್ಕೂ ಹಿತಕರ. ಹಾಗೇ ಮುಖದ ಸೌಂದರ್ಯಕ್ಕೂ ಮದ್ದು. ಬ್ಯೂಟಿಪಾರ್ಲರ್ ಗೆ ಹೋಗಿ ಹಣ ಖರ್ಚು ಮಾಡುವುದಕ್ಕಿಂತ ಮನೆಯಲ್ಲಿಯೇ ಪಪ್ಪಾಯ ಹಣ್ಣಿನಿಂದ ಮುಖದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಸ್ವಲ್ಪ ಪಪ್ಪಾಯಿ ತಿರುಳು, 1 ಹನಿ ನಿಂಬೆ ರಸ, ಅರ್ಧ ಚಮಚ ಹನಿ ಜೇನು ಹಾಕಿ ಮಿಕ್ಸ್ ಮಾಡಿ ದಿನಾ ಹಚ್ಚಿ, ಕಪ್ಪು ಕಲೆ ಬೇಗನೆ ಮಾಯವಾಗುವುದು.
ಪಪ್ಪಾಯಿಯನ್ನು ಜೇನು ಜತೆ ಮಿಕ್ಸ್ ಮಾಡಿ ಹಚ್ಚುವುದರಿಂದ ತ್ವಚೆ ನುಣುಪಾಗುವುದು.
ಪಪ್ಪಾಯಿಗೆ ಸ್ವಲ್ಪ ಆಲೀವ್ ಎಣ್ಣೆ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆ ಇಲ್ಲವಾಗುವುದು, ಬೇಗನೆ ನೆರಿಗೆಯೂ ಬೀಳುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ