Publish Date: Sat, 03 Mar 2018 (10:34 IST)
Updated Date: Sat, 03 Mar 2018 (10:36 IST)
ನವದೆಹಲಿ: ತ್ರಿಪುರಾ, ನ್ಯಾಗಲಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಕೆಲ ಹೊತ್ತಿನಲ್ಲೇ ಪ್ರಕಟವಾಗಲಿದ್ದು, ಸದ್ಯದ ಪರಿಸ್ಥಿತಿ ನೋಡಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗುವ ಲಕ್ಷಣ ತೋರುತ್ತಿದೆ.
ತ್ರಿಪುರಾದಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೂ, ಆಡಳಿತಾರೂಢ ಸಿಪಿಎಂಗಿಂತ ಕೇವಲ 1 ಸ್ಥಾನ ಮುನ್ನಡೆಯಲ್ಲಿದೆ. ಸಿಪಿಎಂ ಮತ್ತು ಬಿಜೆಪಿ ಮೈತ್ರಿ ಕನಸಿನ ಮಾತು. ಮೇಘಾಲಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ಸಾಗಿದ್ದು, ಬಿಜೆಪಿ ತೀರಾ ಹಿನ್ನಡೆಯಲ್ಲಿದೆ.
ಅತ್ತ ನ್ಯಾಗಾಲ್ಯಾಂಡ್ ನಲ್ಲೂ ಎನ್ ಪಿಎಫ್ ನಿಂದ ಬಿಜೆಪಿಗೆ ತೀವ್ರ ಪೈಪೋಟಿ ಸಿಕ್ಕಿದೆ. ಹಾಗಾಗಿ ಇಲ್ಲೂ ಸರ್ಕಾರ ರಚನೆ ಸುಲಭವಲ್ಲ. ಒಟ್ಟಾರೆ ಕೇಂದ್ರ ಸರ್ಕಾರಕ್ಕೆಇದು ಮುಖಭಂಗ ಉಂಟುಮಾಡುವ ಲಕ್ಷಣಗಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ