Select Your Language

Notifications

webdunia
webdunia
webdunia
webdunia

ಬಿಜೆಪಿ ರಕ್ಷಾ ಪಾದ ಯಾತ್ರೆಗೆ ಚಾಲನೆ

ಬಿಜೆಪಿ ರಕ್ಷಾ ಪಾದ ಯಾತ್ರೆಗೆ ಚಾಲನೆ
ಬೆಂಗಳೂರು , ಶುಕ್ರವಾರ, 2 ಮಾರ್ಚ್ 2018 (09:13 IST)
ಬೆಂಗಳೂರು: ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ಮತದಾರರನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದ್ದು ಇಂದಿನಿಂದ ಬೆಂಗಳೂರು ರಕ್ಷಾ ಪಾದ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದ ಬಳಿಯಿಂದ ವಿಶೇಷ ವಾಹನಕ್ಕೆ ಹಸಿರು ನಿಶಾನೆ ತೋರಿದ ಬಿಜೆಪಿ ನಾಯಕ ಆರ್. ಅಶೋಕ್ ಪಾದ ಯಾತ್ರೆಗೆ ಈ ಮೂಲಕ ಚಾಲನೆ ನೀಡಿದ್ದಾರೆ.

ಪ್ರತಿ ನಿತ್ಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಪಾದ ಯಾತ್ರೆ ಕೈಗೊಳ್ಳಲಿದ್ದು, ಕಾಂಗ್ರೆಸ್ ಸರ್ಕಾರದ ಆಡಳಿತದ ವೈಫಲ್ಯಗಳ ಬಗ್ಗೆ ಜನರಿಗೆ ಹೇಳಲಿದ್ದಾರೆ. ಪಾದ ಯಾತ್ರೆ ಕಾರ್ಯಕ್ರಮದ ಅಂತಿಮ ದಿನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರನ್ನು ಕರೆಸಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಯೋಜನೆ ಬಿಜೆಪಿ ನಾಯಕರಿಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಭವಿಷ್ಯ ಇಂದು ನಿರ್ಧಾರ