Publish Date: Mon, 05 Mar 2018 (08:42 IST)
Updated Date: Mon, 05 Mar 2018 (08:44 IST)
ಬೆಂಗಳೂರು: ಖರ್ಜೂರದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ನಿತ್ಯ ಖರ್ಜೂರ ಸೇವಿಸಿದರೆ ಅದರಿಂದಾಗುವ ಲಾಭವೇ ಅದ್ಭುತ.
ಜೀರ್ಣಕ್ರಿಯೆ
ಖರ್ಜೂರದಲ್ಲಿ ಫೈಬರ್ ಅಂಶ ಹೇರಳವಾಗಿದ್ದುಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆ ಇರುವವರಿಗೆ ಇದು ರಾಮಬಾಣ.
ಮುಟ್ಟಿನ ನೋವು
ಮಹಿಳೆಯರಿಗೆ ಋತುಸ್ರಾವದ ಸಂದರ್ಭದಲ್ಲಿ ಬರುವ ಹೊಟ್ಟೆ ನೋವು, ಕಾಲು ನೋವಿನಂತಹ ಸಮಸ್ಯೆಗೆ ಖರ್ಜೂರ ಪರಿಹಾರ. ಇದರಲ್ಲಿ ಕಬ್ಬಿಣದಂಶ ಹೇರಳವಾಗಿದೆ.
ಹೃದಯಕ್ಕೆ
ಖರ್ಜೂರದಲ್ಲಿ ಮ್ಯಾಗ್ನಿಶಿಯಂ ಅಂಶ ಹೇರಳವಾಗಿದ್ದು, ಇದು ಹೃದಯ ಖಾಯಿಲೆ, ಆರ್ಥರೈಟಿಸ್ ಸಮಸ್ಯೆಗಳಿಂದ ದೂರ ಮಾಡುತ್ತದೆ. ಅಷ್ಟೇ ಅಲ್ಲ ರಕ್ತದೊತ್ತಡವನ್ನೂ ನಿಯಂತ್ರಣದಲ್ಲಿಡುತ್ತದೆ.
ಗರ್ಭಿಣಿಯರಿಗೆ
ಗರ್ಭಿಯರು ಕೊನೆಯ ನಾಲ್ಕು ವಾರಗಳಲ್ಲಿ ಸಾಕಷ್ಟು ಖರ್ಜೂರ ಸೇವಿಸಿದರೆ ಹೆರಿಗೆ ತ್ರಾಸದಾಯಕವಾಗಿರುವುದಿಲ್ಲ. ಅಷ್ಟೇ ಅಲ್ಲ, ಗರ್ಭಿಣಿಯಾಗಿದ್ದಾಗ ದೇಹ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ