Select Your Language

Notifications

webdunia
webdunia
webdunia
webdunia

ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಈ ವಿಷಯಗಳ ಬಗ್ಗೆ ಗಮನವಿರಲಿ

ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಈ ವಿಷಯಗಳ ಬಗ್ಗೆ ಗಮನವಿರಲಿ
ಬೆಂಗಳೂರು , ಸೋಮವಾರ, 1 ಜನವರಿ 2018 (07:40 IST)
ಬೆಂಗಳೂರು: ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಶನ್ ಪ್ರಿಯರಿಗೆ ಕಾಮನ್. ಚಿತ್ರನಟರಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲರಿಗೂ ಟ್ಯಾಟೂ ಹಾಕಿಸಿಕೊಳ್ಳುವುದು ಇಷ್ಟ. ಆದರೆ ಅದಕ್ಕಿಂತ ಮೊದಲು ಈ ಕೆಲವು ಮುನ್ನಚ್ಚರಿಕೆ ಕ್ರಮಗಳು ಅಗತ್ಯ.
 

ಮಾದಕ ವಸ್ತು ಸೇವನೆ ಬೇಡ
ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಯಾವುದೇ ಕಾರಣಕ್ಕೂ ಮದ್ಯಪಾನ ಅಥವಾ ಕೆಫೈನ್ ಅಂಶವಿರುವ ವಸ್ತುಗಳನ್ನು ಸೇವಿಸಬೇಡಿ.

ಸಾಕಷ್ಟು ದ್ರವಾಹಾರ ಸೇವಿಸಿ
ಹಚ್ಚೆ ಹಾಕಿಸಿಕೊಳ್ಳುವ ಮೊದಲು ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ಸಾಕಷ್ಟು ನೀರು ಅಥವಾ ದ್ರವಾಂಶ ಸೇವಿಸಿ. ಇದರಿಂದ ಚರ್ಮವೂ ಹಚ್ಚೆ ಹಾಕಿಸಿಕೊಳ್ಳಲು ಸಿದ್ಧಗೊಳ್ಳುತ್ತದೆ.

ನೋವು ನಿವಾರಕಗಳುಗೆ ನೋ
ಟ್ಯಾಟೂ ಹಾಕಿಸಿಕೊಳ್ಳುವ ಎರಡು ದಿನದ ಮೊದಲು ಯಾವುದೇ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬೇಡಿ. ಇಂತಹ ಮಾತ್ರೆಗಳನ್ನು ಸೇವಿಸುವುದರಿಂದ ರಕ್ತಸ್ರಾವವಾಗುವ ಸಂಭವವಿದೆ.

ಅನುಕೂಲಕರ ಬಟ್ಟೆ
ಟ್ಯಾಟೂ ಹಾಕಿಸಿಕೊಳ್ಳುವಾಗ ನಿಮಗೆ ಅನುಕೂಲಕರವಾದ ಡ್ರೆಸ್ ತೊಟ್ಟುಕೊಳ್ಳುವುದೂ ಮುಖ್ಯ. ಸಾಕಷ್ಟು ಗಾಳಿಯಾಡುವಂತಹ ಲೂಸ್ ಡ್ರೆಸ್ ಗಳನ್ನೇ ಧರಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿ ನಿತ್ಯ ಕಹಿಬೇವು ಎಲೆ ಜಗಿದು ನೋಡಿ ಎಂತಹಾ ಪವಾಡವಾಗುತ್ತೆ ಅಂತ!