Publish Date: Thu, 21 Dec 2017 (08:34 IST)
Updated Date: Thu, 21 Dec 2017 (08:35 IST)
ಬೆಂಗಳೂರು: ಅಂಗಾಂಗಳಲ್ಲಿ ಕೂದಲು ಇದ್ದರೆ ಅಸಹ್ಯವಾಗಿ ಕಾಣುತ್ತದೆಂದು ವ್ಯಾಕ್ಸ್ ಮಾಡುವ ಮೊದಲು ಅದರ ಲಾಭಗಳ ಬಗ್ಗೆ ಯೋಚಿಸಿ.
ಹೌದು ಕೂದಲು ಕೈ ಕಾಲಿನಲ್ಲಿದ್ದರೆ ನೋಡಲು ಅಸಹ್ಯವಾಗಿದ್ದರೂ, ಅದರಿಮದ ಅನುಕೂಲವೂ ಇದೆ ಎಂಬುದನ್ನು ಮರೆಯಬೇಡಿ. ಅವುಗಳು ಯಾವುವು ನೋಡೋಣ.
ಬ್ಯಾಕ್ಟೀರಿಯಾ ತಡೆಗಟ್ಟುತ್ತದೆ!
ಕೂದಲು ಇದ್ದರೆ, ಅದು ನಮ್ಮ ಚರ್ಮದ ಮೂಲಕ ದೇಹಕ್ಕೆ ಪ್ರವೇಶಿಸುವ ವೈರಾಣು ಸೋಂಕುಗಳನ್ನು ತಡೆಗಟ್ಟುತ್ತದೆ. ಇದು ಒಂಥರಾ ಪರದೆಯಂತೆ ಕೆಲಸ ಮಾಡುತ್ತದೆ.
ದೇಹದ ಉಷ್ಣತೆ ನಿಯಂತ್ರಿಸುತ್ತದೆ!
ಅಂಗಾಂಗಳಲ್ಲಿರುವ ಕೂದಲು ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಕೂದಲಿದ್ದರೆ, ಚೆನ್ನಾಗಿ ಬೆವರು ಉತ್ಪತ್ತಿಯಾಗುತ್ತದೆ.
ಸಂವೇದನೆ ಹೆಚ್ಚಿಸುತ್ತದೆ
ಪ್ರತೀ ಕೂದಲಿನ ಬೇರಿನಲ್ಲಿ ನರದ ತುದಿ ಭಾಗವಿರುತ್ತದೆ. ಇದು ನಮ್ಮ ದೇಹದಲ್ಲಿರುವ ಇತರ ನರಗಳಿಗಿಂತ ಭಿನ್ನ. ಹೀಗಾಗಿ ಕೂದಲು ಶೇವ್ ಮಾಡಿಕೊಳ್ಳುವುದರಿಂದ ಸಂವೇದನೆ ಕಡಿಮೆಯಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Thu, 21 Dec 2017 (08:34 IST)
Updated Date: Thu, 21 Dec 2017 (08:35 IST)