Select Your Language

Notifications

webdunia
webdunia
webdunia
webdunia

ಪ್ರತಿ ನಿತ್ಯ ಕಹಿಬೇವು ಎಲೆ ಜಗಿದು ನೋಡಿ ಎಂತಹಾ ಪವಾಡವಾಗುತ್ತೆ ಅಂತ!

ಪ್ರತಿ ನಿತ್ಯ ಕಹಿಬೇವು ಎಲೆ ಜಗಿದು ನೋಡಿ ಎಂತಹಾ ಪವಾಡವಾಗುತ್ತೆ ಅಂತ!
ಬೆಂಗಳೂರು , ಸೋಮವಾರ, 1 ಜನವರಿ 2018 (07:36 IST)
ಬೆಂಗಳೂರು: ಕಹಿ ಬೇವಿನ ರುಚಿಯಷ್ಟೇ ಕಹಿ. ಆದರೆ ದಿನ ನಿತ್ಯ ಐದರಿಂದ ಆರು ಕಹಿಬೇವಿನ ಎಲೆ ಜಗಿಯುತ್ತಿದ್ದರೆ ಸಾಕು. ನಮ್ಮ ಆರೋಗ್ಯದ ಮೇಲೆ ಹಲವು ಉತ್ತಮ ಫಲಿತಾಂಶವನ್ನು ಪಡೆಯಬಹುದು.
 

ಚರ್ಮ
ಕಹಿಬೇವಿನ ಮೊದಲ ಗುಣವೆಂದರೆ ಚರ್ಮಕ್ಕೆ ಕಾಂತಿ ನೀಡುವುದು. ಅಷ್ಟೇ ಅಲ್ಲ ಚರ್ಮದಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕಿ, ತುರಿಕೆ, ಅಲರ್ಜಿಯಂತಹ ಚರ್ಮ ಸಂಬಂಧಿ ರೋಗಕ್ಕೂ ಕಹಿಬೇವಿನ ಎಲೆ ಔಷಧವಾಗಿ ಕೆಲಸ ಮಾಡುತ್ತದೆ.

ಕೂದಲು
ಹಿಂದಿನಿಂದ ಕಾಲದಿಂದಲೇ ಕಹಿಬೇವಿನ ಎಣ್ಣೆ ಕೂದಲಿಗೆ ಹಚ್ಚಿಕೊಳ್ಳುವ ಸಂಪ್ರದಾಯ ನಮ್ಮಲ್ಲಿದೆ. ಅದೇ ರೀತಿ ಕಹಿಬೇವಿನ ಎಲೆ ಜಗಿಯುವುದರಿಂದಲೂ ಕೂದಲು ಸೊಂಪಾಗಿ ಬೆಳೆಯುತ್ತದೆ.

ಕಣ್ಣು
ಕಣ್ಣಿನ ತುರಿಕೆ, ಕೆಂಪಗಾಗುವುದು ಇತ್ಯಾದಿ ಸಮಸ್ಯೆಗಳಿಗೆ ಕಹಿಬೇವಿನ ಎಲೆ ಪರಿಹಾರವಾಗಬಹುದು. ಹಾಗೆಯೇ ದೃಷ್ಟಿಯೂ ತೀಕ್ಷ್ಣವಾಗುತ್ತದೆ.

ರೋಗ ನಿರೋಧಕ
ಕಹಿಬೇವಿನಲ್ಲಿ ಆಂಟಿಆಕ್ಸಿಡೆಂಟ್, ಅಲರ್ಜಿ ನಿವಾರಕ ಅಂಶ ಹೇರಳವಾಗಿದ್ದು, ದೇಹಕ್ಕೆ ಉತ್ತಮ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡಬಲ್ಲದು. ಅಷ್ಟೇ ಅಲ್ಲ, ಸಾಮಾನ್ಯ ಜ್ವರದಿಂದ ಕ್ಯಾನ್ಸರ್, ಹೃದಯ ಖಾಯಿಲೆಯಂತಹ ಗಂಭೀರ ರೋಗಗಳನ್ನೂ ತಡೆಗಟ್ಟುವ ಸಾಮರ್ಥ್ಯ ಕಹಿಬೇವಿನ ಎಲೆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ವಾಸಕೋಶದ ಸೇಫ್ಟಿಗೆ ಇಷ್ಟು ಮಾಡಿ ಸಾಕು!