Select Your Language

Notifications

webdunia
webdunia
webdunia
webdunia

ನಿಮ್ಮ ಮಗಳು ಋತುಮತಿಯಾಗುವ ಮೊದಲು ಅವಳಲ್ಲಾಗುವ ಲಕ್ಷಣವನ್ನು ತಿಳಿಯಬೇಕಾ ಇಲ್ಲಿದೆ ನೋಡಿ ಸುಲಭ ದಾರಿ

ನಿಮ್ಮ ಮಗಳು ಋತುಮತಿಯಾಗುವ ಮೊದಲು ಅವಳಲ್ಲಾಗುವ ಲಕ್ಷಣವನ್ನು ತಿಳಿಯಬೇಕಾ ಇಲ್ಲಿದೆ ನೋಡಿ ಸುಲಭ ದಾರಿ
ಬೆಂಗಳೂರು , ಭಾನುವಾರ, 31 ಡಿಸೆಂಬರ್ 2017 (06:49 IST)
ಬೆಂಗಳೂರು: ಒಬ್ಬ ಹುಡುಗಿ ಋತುಮತಿಯಾಗುವ ಸಾಮಾನ್ಯ ವಯಸ್ಸು12 ರಿಂದ 13. ಕೆಲವು ಸಂದರ್ಭಗಳಲ್ಲಿ 8 ರಿಂದ 9 ನೇ ವಯಸ್ಸಿನಲ್ಲಿಯೆ ಋತುಮತಿಯಾಗುತ್ತಾರೆ. ನಿಮ್ಮ ಪುಟ್ಟಮಗಳು ದೊಡ್ಡವಳಾಗುತ್ತಿದ್ದಾಳೆ ಅನ್ನೊದನ್ನು ತೋರಿಸಲು ಹಲವಾರು ಲಕ್ಷಣಗಳು ಅವರಲ್ಲಿ ಕಾಣಿಸುತ್ತದೆ. ಋತುಮತಿಯಾಗುವ 3 ರಿಂದ 6 ತಿಂಗಳ ಮೊದಲು ಹುಡುಗಿಯರ ಕೆಲವು ಅಂಗಾಂಗಗಳಲ್ಲಿ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ಆ ಸೂಕ್ಷ್ಮ ಬದಲಾವಣೆಗಳನ್ನು ನೀವು ಗಮನಿಸಿ ಅವರಿಗೆ ಆ ಬಗ್ಗೆ ಅರಿವು ಮೂಡಿಸಬೇಕು.

ಈ ವಯಸ್ಸಿನಲ್ಲಿ ಮೆಟಾಬಾಲಿಸಂ ಸ್ಲೋ ಆಗುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವುದರ ಜೊತೆಗೆ ಎತ್ತರವು ಹೆಚ್ಚಾಗುತ್ತದೆ. ಇದರಿಂದ ದೇಹದ ಎಲ್ಲಾ ಭಾಗಗಳ ಆಕಾರ ಬದಲಾಗುತ್ತದೆ. ಋತಿಮತಿಯಾಗುವ ಸಂದರ್ಭದಲ್ಲಿ ಅವರ ಕೈ, ಎದೆ ಹಾಗು ಹೊಟ್ಟೆಯ ಮೇಲೆ ಕೂದಲು ಹೆಚ್ಚಾಗಿ ಬೆಳೆಯಲು ಆರಂಭಿಸುತ್ತದೆ. ಇದು ಹಾರ್ಮೋನಲ್ ಬದಲಾವಣೆಯ ಲಕ್ಷಣದಿಂದ ಆಗುವುದು. ಗುಪ್ತಾಂಗ ಮತ್ತು ಅಂಡರ್ ಆರ್ಮ್ಸ್ ನಲ್ಲಿಯೂ ಕೂಡ ಕೂದಲು  ಬೆಳೆಯಲು ಪ್ರಾರಂಭವಾಗುತ್ತದೆ. ಇದು ಪೂರ್ತಿಯಾಗಿ ಬೆಳೆಯಲು ಮೂರು ವರ್ಷ ಬೇಕಾಗುತ್ತದೆ.

 
ಪಿಂಪಲ್ಸ್ ಮತ್ತು ಸ್ಕಿನ್ ಸಮಸ್ಯೆ ಉಂಟಾಗುತ್ತದೆ.ಅವರ ಮುಖದಲ್ಲಿ ಪಿಂಪಲ್ಸ್ ಬರಲು ಪ್ರಾರಂಭವಾಗುತ್ತದೆ. ಅಲ್ಲದೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಸಹ ಕಾಡುತ್ತದೆ. ಹಾಗೆ ಅವರ ಸ್ತನದ ಗಾತ್ರ ಕೂಡ ಹೆಚ್ಚಾಗುತ್ತದೆ. ಇದು ಒಂದು ಮುಖ್ಯವಾದ ಲಕ್ಷಣವಾಗಿದೆ. 9 ನೇ ವಯಸ್ಸಿನಲ್ಲಿ ಅವರ ಸ್ತನದ ಗಾತ್ರ ಹೆಚ್ಚಾಗುತ್ತದೆ ಇದು ಅವರ ದೇಹದ ತೂಕದ ಮೇಲೆ ಅವಲಂಭಿಸಿದೆ. ಇನ್ನೊಂದು ಮುಖ್ಯವಾದ ಲಕ್ಷಣವೆಂದರೆ ಅವರ ಗುಪ್ತಾಂಗದಲ್ಲಿ ಬಿಳಿ ಹೋಗುವುದು ಕಾಣಿಸಿಕೊಳ್ಳುತ್ತದೆ. ಇದರ ಅರ್ಥ ಅವರು ಋತುಮತಿಯಾಗಲಿದ್ದಾರೆ ಎಂದು. ಒಂದುವೇಳೆ ಹೆಚ್ಚಿನ ಪ್ರಮಾಣದಲ್ಲಿ ಆದ್ರೆ ಅವರು ಸದ್ಯದಲ್ಲೇ  ಋತುಮತಿಯಾಗುತ್ತಾರೆ ಎಂದರ್ಥ. ಈ ಎಲ್ಲಾ ಮಾಹಿತಿಗಳನ್ನು ದೊಡ್ಡವರು ಹೆಣ್ಣುಮಕ್ಕಳಿಗೆ ನೀಡಿದರೆ ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಅಚ್ಚುಮೆಚ್ಚಿನ ಟೂತ್‌ಪೇಸ್ಟ್‌ ಕ್ಯಾನ್ಸರ್ ಉಂಟುಮಾಡುತ್ತೆ, ನಿಮ್ಗೆ ಗೊತ್ತಾ?