Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
  • facebook
  • twitter
  • whatsapp
share
ಬುಧವಾರ, 25 ನವೆಂಬರ್ 2020 (08:45 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ನಿಮ್ಮ ಭಾವನೆಗಳಿಗೆ ತಕ್ಕಂತೆ ನಡೆದುಕೊಳ್ಳಿ. ಯಾರದೋ ತಪ್ಪಿಗೆ ನೀವು ಬಲಿಪಶುವಾಗಬೇಕಾದ ಸಂದರ್ಭ ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದೇ ಇರುತ್ತದೆ. ಎಲ್ಲವನ್ನೂ ನಿಭಾಯಿಸುವ ತಾಳ್ಮೆ ಬೆಳೆಸಿಕೊಳ್ಳಿ.

ವೃಷಭ: ನಿಮ್ಮ ಮನಸ್ಸಿಗೆ ಹಿಡಿಸಿದವರ ಜತೆ ಉತ್ತಮ ಸಮಯ ಕಳೆಯುವ ಅವಕಾಶ ಎದುರಾಗಲಿದೆ. ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲಿದ್ದಾರೆ. ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಕಾರ್ಯನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಮಿಥುನ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಇದು ಸಕಾಲ. ಅಂದುಕೊಂಡ ಯೋಜನೆಗಳು ಯಶಸ್ವಿಯಾಗಲಿವೆ. ವಾಹನ ಸಂಚಾರದಲ್ಲಿ ಎಚ್ಚರ ಅಗತ್ಯ.

ಕರ್ಕಟಕ: ಯೋಗ್ಯ ವಯಸ್ಕರಿಗೆ ಮನಸ್ಸಿಗೆ ಹಿಡಿಸಿದವರ ಜತೆ ವೈವಾಹಿಕ ಭಾಗ್ಯ ಒದಗಿಬರುವುದು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಸಿಗುವುದು. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ವೃತ್ತಿರಂಗದಲ್ಲಿ ನಿಮ್ಮ ಏಳಿಗೆಗೆ ತೊಡಕುಂಟುಮಾಡುವವರು ಇದ್ದೇ ಇರುತ್ತಾರೆ. ಅವರನ್ನು ಮೀರಿ ಬೆಳೆಯಲು ಪ್ರಯತ್ನಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಮುನ್ನಡೆ ಒದಗಿಬರುವುದು. ಸದ್ಯದಲ್ಲೇ ವಾಹನ ಖರೀದಿ ಮಾಡುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲಿದ್ದೀರಿ. ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ತುಲಾ: ಎದುರಾಗುವ ಅವಕಾಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದನ್ನು ಕಲಿಯಿರಿ. ಅಪರಿಚಿತರೊಂದಿಗೆ ಅತಿಯಾದ ಸಲುಗೆ ಬೇಡ. ಕಳೆದ ಹೋದ ವಸ್ತು, ಸಂಬಂಧ ಮರಳಿ ಬರುವುದು. ಅನಗತ್ಯ ಚಿಂತೆಗೆ ಕಡಿವಾಣ ಹಾಕಿ.

ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಮನೆಯಲ್ಲಿ ಕಳ್ಳತನದ ಭೀತಿಯಿದೆ. ಹಿರಿಯರಿಂದ ಬಂದ ಬಳವಳಿಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಹೊಸ ವ್ಯವಹಾರ ಶುರು ಮಾಡಲು ಸಕಾಲ.

ಧನು: ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೊಳಿಸಲು ಸಕಾಲ. ನಾಟಕೀಯ ವರ್ತನೆ ತೋರುವವರ ಜತೆ ಎಚ್ಚರಿಕೆಯಿಂದ ವ್ಯವಹರಿಸಿ. ಸರಕಾರಿ ಕೆಲಸದಲ್ಲಿರುವವರಿಗೆ ಮುಂಬಡ್ತಿ ಯೋಗವಿದೆ. ಹಿರಿಯರ ಸಲಹೆಯನ್ನು ಪಾಲಿಸಿದರೆ ಉತ್ತಮ.

ಮಕರ: ಬರೀ ಯೋಜನೆಗಳನ್ನೇ ಹಾಕುತ್ತಿದ್ದರೇ ಪ್ರಯೋಜನವಾಗದು. ನಿಮ್ಮ ಪಾಲಿಗೆ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗುವುದು. ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ.

ಕುಂಭ: ಆರ್ಥಿಕವಾಗಿ ಚೇತರಿಕೆ ಕಂಡುಬಂದು ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆಯಿಂದಿರಬೇಕು. ಕ್ರಯ ವಿಕ್ರಯ ವ್ಯವಹಾರಗಳು ಲಾಭ ತಂದುಕೊಡಲಿವೆ. ಸಂಗಾತಿಗಾಗಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ.

ಮೀನ: ಸರಿಯಾದ ತಯಾರಿ ನಡೆಸಿ ಹೆಜ್ಜೆಯಿಡುವುದರಿಂದ ಗುರಿ ತಲುಪಬಹುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ಅವಿವಾಹಿತರ ವಿವಾಹ ಪ್ರಸ್ತಾಪಗಳು ಸ್ವಲ್ಪದರಲ್ಲೇ ಕೈ ತಪ್ಪಿಹೋಗಲಿವೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ದಿನ ಪಂಚಾಂಗ ಹೀಗಿದೆ!