Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 1 ನವೆಂಬರ್ 2019 (08:22 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿಗಳು ನಿಮ್ಮ ಮನಸ್ಸನ್ನು ಹೈರಾಣಾಗಿಸಲಿದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಮೂಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕ ವಾತಾವರಣವಿರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ನಿಮ್ಮ ಬಗ್ಗೆ ಪ್ರಶಂಸೆ ವ್ಯಕ್ತವಾಗುವುದು. ನಿಮ್ಮ ಕ್ರಿಯಾತ್ಮಕತೆಯಿಂದ ಉತ್ತಮ ಫಲ ಪಡೆಯುವಿರಿ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಹುಡುಕಾಟದಲ್ಲಿ ಯಶಸ್ಸು ಸಿಗಲಿದೆ.

ಮಿಥುನ: ವ್ಯಾಪಾರ, ವ್ಯವಹಾರಗಳು ಹೆಚ್ಚು ಲಾಭದಾಯಕವೆನಿಸಲಿದೆ ವೃತ್ತಿರಂಗದಲ್ಲಿ ಕಾರ್ಯದೊತ್ತಡದವಿದ್ದರೂ ನಿಮ್ಮ ಜವಾಬ್ಧಾರಿಯನ್ನು ನಿಭಾಯಿಸಬೇಕಾಗುತ್ತದೆ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡಬೇಡಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಕರ್ಕಟಕ: ಶುಭ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಹಿರಿಯರ ಸಲಹೆಗಳು ಇಷ್ಟವಾಗದೇ ಹೋಗಬಹುದು. ನಿರೀಕ್ಷಿತ ಮೂಲಗಳಿಂದ ಆದಾಯ ಬರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿ ಅಂದುಕೊಂಡಿದ್ದನ್ನು ಸಾಧಿಸುವಿರಿ.

ಸಿಂಹ: ಅನಗತ್ಯ ವಿಚಾರಗಳಲ್ಲಿ ವಾದ ವಿವಾದಗಳುಂಟಾಗಬಹುದು. ಮಾತಿನ ಮೇಲೆ ನಿಗಾ ಇರಲಿ. ದುಡುಕಿನ ವರ್ತನೆಯಿಂದ ಕಾರ್ಯ ಹಾಳಾಗಬಹುದು. ಮಕ್ಕಳ ವಿಚಾರದಲ್ಲಿ ಚಿಂತೆಯಾಗಬಹುದು. ಆರೋಗ್ಯದಲ್ಲಿ ಏರುಪೇರಾಗಬಹುದು, ಎಚ್ಚರ.

 
ಕನ್ಯಾ: ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗಲಿದೆ. ಆದರೆ ಪ್ರಯಾಣದಲ್ಲಿ ವಾಹನ ಸವಾರರು ಎಚ್ಚರವಾಗಿರಬೇಕು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಕೈ ತಪ್ಪಿ ಹೋದ ಅವಕಾಶಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ.

ತುಲಾ: ಕುಟುಂಬದಲ್ಲಿ ಶುಭ ಕಾರ್ಯ ನಿಮಿತ್ತ ತಯಾರಿಗಳು ನಡೆಯಲಿವೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಸಂಭ್ರಮದ ವಾತಾವರಣ ಮನೆ ಮಾಡಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಲಭ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ವೃಶ್ಚಿಕ:ಆರ್ಥಿಕವಾಗಿ ಚೇತರಿಕೆ ಕಂಡುಬಂದು ಕೈಗೊಂಡ ಯೋಜನೆಗಳು ಫಲಗೂಡಲಿವೆ. ಆದರೆ ವಾತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಸಂಗಾತಿಯ ಮನೋಕಾಮನೆ ಪೂರೈಸಲು ಧನವ್ಯಯವಾಗಬಹುದು. ದಿನದಂತ್ಯಕ್ಕೆ ಶುಭ ಸುದ್ದಿ.

ಧನು: ಕೈ ತಪ್ಪಿ ಹೋದ ಅವಕಾಶಗಳನ್ನು ಮರಳಿ ಪಡೆಯಲು ಇದು ಸಕಾಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ಮಿತ್ರರ ನೆರವು ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ವಂಚನೆಗೊಳಗಾಗದಂತೆ ಎಚ್ಚರವಹಿಸಬೇಕು. ಕುಲದೇವರ ಪ್ರಾರ್ಥನೆಯಿಂದ ಒಳಿತಾಗುತ್ತದೆ.

ಮಕರ: ನಿಮ್ಮ ಪ್ರಯತ್ನಬಲದಲ್ಲಿ ನಂಬಿಕೆಯಿಡಿ. ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಮನೆ, ಆಸ್ತಿ ಖರೀದಿಗೆ ಚಿಂತನೆ ನಡೆಸುವಿರಿ. ಉದ್ಯೋಗ ಬದಲಾವಣೆ ಮಾಡುವ ಮನಸ್ಸಾಗುವುದು. ಸಾಲಗಳು ಮರುಪಾವತಿಯಾಗಲಿವೆ. ವ್ಯವಹಾರದಲ್ಲಿ ಎಚ್ಚರ.

ಕುಂಭ: ಆಗಾಗ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾಗಬಹುದು. ಕಾಳಜಿ ವಹಿಸುವುದು ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆಗೆ ಸಹೋದ್ಯೋಗಿಗಳೇ ಅಸೂಯೆಪಡುವರು. ಮೇಲಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವರ್ತಿಸಿ.

ಮೀನ: ಹೊಸ ಕೆಲಸಗಳಿಗೆ ಕೈ ಹಾಕಲು ಉತ್ಸಾಹ ಮೂಡಬಹುದು. ಆದರೆ ಸಮಯ ಕಳೆದಂತೆ ನಿರುತ್ಸಾಹ ಕಾಡಿ ಅರ್ಧಕ್ಕೇ ಕುಂಠಿತವಾಗಬಹುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ