Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 31 ಅಕ್ಟೋಬರ್ 2019 (09:01 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೌಟುಂಬಿಕವಾಗಿ ಹಲವು ವಿಚಾರಗಳು ಗೊಂದಲಕ್ಕೀಡುಮಾಡುವುದು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ದಿನ ನಿಮ್ಮದಾಗುವುದು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡುವಿರಿ.

ವೃಷಭ: ಅಂದುಕೊಂಡ ಕೆಲಸಗಳಿಗೆ ಹಲವು ವಿಘ್ನಗಳು ತೋರಿಬಂದು ಅರ್ಧಕ್ಕೇ ನಿಲ್ಲಬಹುದು. ವ್ಯಾಪಾರ, ವ್ಯವಹಾರದಲ್ಲಿ ಸಣ್ಣಪುಟ್ಟ ತೊಂದರೆಗಳಾದರೆ ಧೈರ್ಯ ಕಳೆದುಕೊಳ್ಳಬೇಡಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಕಾರ ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಮಿಥುನ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕೌಟುಂಬಿಕವಾಗಿ ಸುಂದರ ದಿನ ನಿಮ್ಮದಾಗಲಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು, ಕಾಳಜಿ ಅಗತ್ಯ.

ಕರ್ಕಟಕ: ವೃತ್ತಿರಂಗದಲ್ಲಿ ನಿಮ್ಮ ಕೆಲಸಕ್ಕೆ ತೊಂದರೆ ಕೊಡುವ ಅನೇಕರು ಇರುತ್ತಾರೆ. ಆದರೆ ಧೃತಿಗೆಡಬಾರದು. ಅಂತಿಮವಾಗಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಪ್ರಯಾಣದಲ್ಲಿ ಎಚ್ಚರ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಮನೆ ಅಥವಾ ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ಶೈಕ್ಷಣಿಕ ರಂಗದಲ್ಲಿರುವವರಿಗೆ ಮುನ್ನಡೆಯ ಲಾಭವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ದೇವತಾ ಪ್ರಾರ್ಥನೆ ಮಾಡಿ.

 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಮನಸ್ಸಿಗೆ ಹಿಂಸೆಯಾಗಬಹುದು. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಗೃಹೋಪಯೋಗಿ ವಸ್ತುಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ.

ತುಲಾ: ಹೆಚ್ಚಿನ ಧನಾಗಮನಕ್ಕೆ ನಾನಾ ರೀತಿಯ ಮಾರ್ಗಗಳನ್ನು ಹುಡುಕುವಿರಿ. ಆದರೆ ಹಿತ ಶತ್ರುಗಳ ಬಗ್ಗೆ ಎಚ್ಚರವಹಿಸಿ. ವಂಚನೆಗೊಳಗಾಗುವ ಭೀತಿಯಿದೆ. ಸ್ವ ಉದ್ಯೋಗಿಗಳಿಗೆ ನಿವ್ವಳ ಲಾಭ ಸಿಗಲಿದೆ. ಕೌಟುಂಬಿಕವಾಗಿ ಜವಾಬ್ಧಾರಿಗಳು ಅಧಿಕವಾಗುವುದು.

ವೃಶ್ಚಿಕ: ಉನ್ನತ ವ್ಯಾಸಂಗಕ್ಕಾಗಿ ವಿದೇಶ ಯಾನದ ಯೋಗವಿದೆ. ದುಡುಕು ಮಾತನಾಡಿ ಪ್ರೀತಿ ಪಾತ್ರರ ಮನಸ್ಸು ನೋಯಿಸದಿರಿ. ಉದ್ಯೋಗ ಕ್ಷೇತ್ರದಲ್ಲಿ ಕೆಳಹಂತದ ನೌಕರರಿಗೆ ವೇತನ ಹೆಚ್ಚಳ ಸಾಧ್ಯತೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಧನು: ನಿಮ್ಮ ಕೆಲವು ನಿರ್ಧಾರಗಳು ಸಂಗಾತಿಗೆ ಪಥ್ಯವಾಗದೇ ಹೋಗಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಕುಟುಂಬದವರ ಮಾತಿಗೆ ಬೆಲೆಕೊಡಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರೋಗ್ಯದಲ್ಲಿ ಏರುಪೇರಾಗಬಹುದು, ಎಚ್ಚರ.

ಮಕರ: ಸಂತೋಷಪಡಲು ಇಂದು ನಿಮಗೆ ನಾನಾ ಕಾರಣಗಳು ಸಿಗುತ್ತವೆ. ದೈವಾನುಕೂಲದಿಂದ ನೀವು ಅಂದುಕೊಂಡ ರೀತಿಯಲ್ಲೇ ಯೋಜನೆಗಳು ನಡೆಯಲಿವೆ. ಆದರೆ ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದ್ದು, ಎಚ್ಚರಿಕೆ ಅಗತ್ಯ. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ.

ಕುಂಭ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಉತ್ತಮ ಫಲ ಸಿಗಬಹುದು. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು.

ಮೀನ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನೂತನ ದಂಪತಿಗೆ ಮಧು ಚಂದ್ರ ಭಾಗ್ಯವಿದೆ. ಉದ್ಯೋಗ ರಂಗದಲ್ಲಿ ಸಮಾಧಾನಕರ ಮುನ್ನಡೆಯಿರುತ್ತದೆ. ಅತಿ ಆಸೆ ಬೇಡ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಾಗದು. ಖರ್ಚಿನ ಬಗ್ಗೆ ಲೆಕ್ಕವಿಟ್ಟುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ಗ್ರಹ ಬಲಾಢ್ಯನಾಗಿದ್ದರೆ ಯಾವ ಫಲ?