Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
  • facebook
  • twitter
  • whatsapp
share
ಮಂಗಳವಾರ, 29 ಅಕ್ಟೋಬರ್ 2019 (09:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದಿನದಾರಂಭದಲ್ಲಿ ಕಿರಿ ಕಿರಿಯಿದ್ದರೂ ನಿಧಾನವಾಗಿ ನಿಮ್ಮ ಮನೋಬಲದಿಂದ ನೆಮ್ಮದಿ ಕಂಡುಕೊಳ್ಳುವಿರಿ. ಸಂಗಾತಿ ಜತೆಗೆ ಹೊಂದಾಣಿಕೆಯಿಂದ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವುದು ಮುಖ್ಯ. ದೇಹಾರೋಗ್ಯದಲ್ಲಿ ಏರುಪೇರಾದೀತು. ಕಾಳಜಿ ಅಗತ್ಯ.

ವೃಷಭ: ಪ್ರಿಯ ಜನರ ಭೇಟಿ ಮನಸ್ಸಿಗೆ ಖುಷಿ ಕೊಡುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಸ್ಥಾನದಲ್ಲಿ ಬಡ್ತಿ ಸಂಭವವಿದೆ. ವ್ಯವಹಾರದಲ್ಲಿ ಕೊಂಚ ಹಿನ್ನಡೆಯಾಗಬಹುದು. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಸಫಲತೆ ಸಿಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.

ಮಿಥುನ: ಪಾಲು ಬಂಡವಾಳ ಹೂಡಿಕೆಗೆ ಇದು ಸಕಾಲ. ಆದರೆ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಅಪ್ಪಿ ತಪ್ಪಿಯೂ ಇಂದು ಸಾಲ ಕೊಡಲು ಹೋಗಬೇಡಿ. ಪ್ರೀತಿ ಪಾತ್ರರೊಂದಿಗೆ ಸುಮಧುರ ಕ್ಷಣ ಕಳೆಯುವಿರಿ. ದಾಯಾದಿ ಕಲಹಗಳು ಅಂತ್ಯವಾಗಿ ನೆಮ್ಮದಿ ಮೂಡುವುದು.

ಕರ್ಕಟಕ: ಇಷ್ಟ ಮಿತ್ರರ ಭೇಟಿ, ಭೋಜನ ಸಾಧ‍್ಯತೆಯಿದೆ. ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿಗಳು ಬಂದರೂ ನೆಮ್ಮದಿಗೆ ಕೊರತೆಯಿರದು. ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗುವುದು. ದೇವಾಲಯ ಸಂದರ್ಶನ ಸಾಧ್ಯತೆಯಿದೆ.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಉನ್ನತಿಯ ಯೋಗವಿದೆ. ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಸ್ಥಾನ ಪಲ್ಲಟ ಭೀತಿಯಿರಲಿದೆ. ಸಂಗಾತಿಯ ಸಹಕಾರ ಸಿಗುವುದು. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರವಾಗಿರಬೇಕು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

 
ಕನ್ಯಾ: ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗುವುದು. ಮನೆಯಲ್ಲಿ ಅತಿಥಿಗಳ ಆಮನವಾಗಲಿದ್ದು, ಮನಸ್ಸಿಗೆ ಖುಷಿಯಾಗುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಹೆಚ್ಚಿನ ಧನಾದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಅಲೆದಾಡುವುದು ತಪ್ಪದು. ತಾಳ್ಮೆ ಕಳೆದುಕೊಳ್ಳಬೇಡಿ. ವ್ಯವಹಾರದಿಂದ ಲಾಭವಾಗಲಿದೆ.

ವೃಶ್ಚಿಕ: ಪ್ರೀತಿ ಪಾತ್ರರಿಂದ ದೂರವಾಗುವ ಅಗಲಿಕೆಯ ನೋವು ಕಾಡಲಿದೆ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ಶೈಕ್ಷಣಿಕ ರಂಗದಲ್ಲಿರುವವರು ಮೆಚ್ಚುಗೆಗೆ ಪಾತ್ರರಾಗುವರು. ಕಲಾರಾಧಕರಿಗೆ ಕೀರ್ತಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ ಸಿಗಲಿದೆ.

ಧನು: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಕೃಷಿ ಕ್ಷೇತ್ರದಲ್ಲಿರುವವರಿಗೆ ವ್ಯವಹಾರದಲ್ಲಿ ನೂರೆಂಟು ವಿಘ್ನಗಳು ಎದುರಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೇ ನಿಮ್ಮ ಏಳಿಗೆಗೆ ಅಸೂಯೆಪಡುವ ಪರಿಸ್ಥಿತಿ ಇರಲಿದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.

ಕುಂಭ: ಪ್ರೀತಿ ಪಾತ್ರರೊಂದಿಗಿನ ಒಡನಾಟ ಮನಸ್ಸಿಗೆ ಖುಷಿ ನೀಡುವುದು. ಆದರೆ ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯದ ಬಗ್ಗೆ ಕೊಂಚ ಕಾಳಜಿ ಮಾಡಬೇಕಾಗುತ್ತದೆ. ಕಷ್ಟಗಳು ಬಂದಾಗ ಮಿತ್ರರ ನೆರವು ಸಿಗಲಿದೆ. ಸಂಗಾತಿಯ ಅಸಹಕಾರ ಮನಸ್ಸಿಗೆ ನೋವುಂಟುಮಾಡಬಹುದು.

ಮೀನ: ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸುವಿರಿ. ನೂತನ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆ ಎದುರಾಗಬಹುದು. ವಾಹನ ಖರೀದಿ ಯೋಗವಿದೆ. ಆದರೆ ಖರ್ಚು ವೆಚ್ಚದ ಬಗ್ಗೆ ಹಿಡಿತ ಅಗತ್ಯ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ಕಳ್ಳರಿಂದ ಮನೆಯನ್ನು ರಕ್ಷಿಸಲು ವಾಸ್ತುಶಾಸ್ತ್ರದ ಪ್ರಕಾರ ಮನೆಗೆ ಬೀಗ ಹಾಕಿ