ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 21 ಮೇ 2019 (07:27 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ತಪ್ಪದು. ಪ್ರಾಮಾಣಿಕವಾಗಿದ್ದರೂ ವಿನಾಕಾರಣ ಅಪವಾದದಿಂದಾಗಿ ಬೇಸರವಾದೀತು. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣವಿರುವುದು.

ವೃಷಭ: ಅನವ‍‍ಶ್ಯಕವಾಗಿ ಕಲಹಕ್ಕೆ ಎಡೆಮಾಡಿಕೊಡದಿರಿ. ಆರೋಗ್ಯ ಭಾಗ್ಯ ಸುಧಾರಿಸಲಿದೆ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ನೂತನ ದಂಪತಿಗಳಿಗೆ ಸಂತಸದ ವಾರ್ತೆಯಿದೆ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇದ್ದರೂ ನಿಮ್ಮ ಮುನ್ನಡೆಗೆ ತೊಂದರೆಯಾಗದು. ಸರ್ಕಾರಿ ಕೆಲಸ ಕಾರ್ಯಗಳಿಂದ ಕಾರ್ಯ ಸಾಧನೆಗೆ ಅಡ್ಡಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.

ಕರ್ಕಟಕ: ನೌಕರ ವರ್ಗದವರಿಗೆ ಉದ್ಯೋಗದಲ್ಲಿ ವೇತನ ಹೆಚ್ಚಳ ಸಾಧ್ಯತೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗವಾಕಶಗಳು ಸಿಗಲಿವೆ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಕಾಣುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಸಿಂಹ: ಅನಗತ್ಯವಾಗಿ ದುಡುಕಿ ಮಾತನಾಡಿ ಕೊನೆಗೆ ಮಾನಸಿಕವಾಗಿ ಬೇಸರ ಮಾಡಿಕೊಳ್ಳುವಿರಿ. ಆದರೆ ಸಂಗಾತಿಯಿಂದ ಸಮಾಧಾನ ಸಿಗಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸಿಗಲಿದೆ. ತಾಳ್ಮೆ ಅಗತ್ಯ.

 
ಕನ್ಯಾ: ಉದ್ಯೋಗದಲ್ಲಿ ಯಾರೋ ಮಾಡಿದ ಪುಣ್ಯದ ಫಲ ಪ್ರಾಪ್ತಿಯಾಗಿ ಬಡ್ತಿ ಸಿಗಲಿದೆ. ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ಆದರೆ ಸಂಗಾತಿಯ ಅಭಿಪ್ರಾಯಗಳಿಗೆ ಬೆಲೆಕೊಡುವುದು ಮುಖ್ಯ.

ತುಲಾ: ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ವ್ಯಾಪಾರ, ವಹಿವಾಟಿನಲ್ಲಿ ಹೂಡಿಕೆ ಮಾಡಲು ತಕ್ಕ ಸಮಯ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.

ವೃಶ್ಚಿಕ: ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಸಂಗಾತಿಯ ಮನ ಅರಿತು ನಡೆದುಕೊಳ್ಳುವುದು ಮುಖ್ಯ. ಮಕ್ಕಳ ಭವಿಷ್ಯದ ಬಗ್ಗೆ ರೂಪು ರೇಷೆ ಹಾಕುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯಿದೆ.

ಧನು: ವೃತ್ತಿರಂಗದಲ್ಲಿ ಪ್ರತಿಷ್ಠಿತರ ಸಹಕಾರದಿಂದ ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ಹಣಕಾಸಿನ ವಿಚಾರದಲ್ಲಿ ಯೋಚಿಸಿ ಮುನ್ನಡೆಯಿರಿ. ಸಾಂಸಾರಿಕವಾಗಿ ಋಣಾತ್ಮಕ ಚಿಂತನೆಗಳಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ.

ಮಕರ: ನಿಮ್ಮಲ್ಲಿರುವ ಪ್ರತಿಭೆ ಗುರುತಿಸಲ್ಪಡುವುದು. ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಆದಾಯ ಗಳಿಸಬಹುದು. ಆದರೆ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ಅವಿವಾಹಿತರು ಯೋಗ್ಯ ಸಂಬಂಧಕ್ಕಾಗಿ ಕೆಲ ಕಾಲ ಕಾಯುವುದು ಒಳ್ಳೆಯದು.

ಕುಂಭ: ಪ್ರೇಮಿಗಳಿಗೆ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳು. ಆದರೆ ಉದ್ಯೋಗ ನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಹಿತ ಶತ್ರುಗಳ ಬಗ್ಗೆ ಎಚ್ಚರ.

ಮೀನ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಕೈಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ದಾಂಪತ್ಯದಲ್ಲಿ ಶುಭವಾರ್ತೆ ಕೇಳುವಿರಿ. ಆರ್ಥಿಕ ಪರಿಸ್ಥಿತಿ ಚಿಂತೆಗೆ ಕಾರಣವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಶುಭ ಗ್ರಹಗಳ ದೃಷ್ಟಿ ಬಿದ್ದರೆ ಆಯಾ ರಾಶಿಯವರು ಈ ಮಂತ್ರವನ್ನು ಪಠಿಸಿದರೆ ಯಶಸ್ಸು ಖಂಡಿತ