Select Your Language

Notifications

webdunia
webdunia
webdunia
webdunia

ಭಗವಾನ್ ಶ್ರೀ ಕೃಷ್ಣನ ಮುಡಿಯಲ್ಲಿ ನವಿಲುಗರಿ ಬಂದಿದ್ದು ಹೇಗೆ ಗೊತ್ತಾ?

ಭಗವಾನ್ ಶ್ರೀ ಕೃಷ್ಣನ ಮುಡಿಯಲ್ಲಿ ನವಿಲುಗರಿ ಬಂದಿದ್ದು ಹೇಗೆ ಗೊತ್ತಾ?
ಬೆಂಗಳೂರು , ಸೋಮವಾರ, 20 ಮೇ 2019 (07:38 IST)
ಬೆಂಗಳೂರು: ಶ್ರೀಕೃಷ್ಣ ದೇವರ ಭಾವಚಿತ್ರ ನೋಡುವಾಗಲೆಲ್ಲಾ ಮುಡಿಯಲ್ಲಿ ಸುಂದರ ನವಿಲುಗರಿಯೇ ನಮಗೆ ಕಾಣುವುದು. ಅಷ್ಟಕ್ಕೂ ಕೃಷ್ಣನ ಮುಡಿಗೆ ನವಿಲುಗರಿ ಬಂದಿದ್ದು ಹೇಗೆ ಗೊತ್ತಾ?


ಒಮ್ಮೆ ಶ್ರೀಕೃಷ್ಣ ಕಾನನದ ನಡುವೆ ಕೂತು ತನ್ಮಯನಾಗಿ ಕೊಳಲಿನ ನಾದ ಮಾಡುತ್ತಿದ್ದನಂತೆ. ಆಗ ಕಾಡಿನಲ್ಲಿದ್ದ ನವಿಲುಗಳು ಕೃಷ್ಣನ ಕೊಳಲಿನ ದ್ವನಿಗೆ ಮನಸೋತು ಓಡೋಡಿ ಬಂದು ನರ್ತಿಸಲು ಪ್ರಾರಂಭಿಸಿದವಂತೆ.

ತನ್ನ ಬಳಿಗೆ ಬಂದು ನರ್ತಿಸುವ ನವಿಲುಗಳನ್ನು ನೋಡಿ ಸಂತಸಗೊಂಡ ಕೃಷ್ಣನೂ ನರ್ತಿಸಲಾರಂಭಿಸಿದನಂತೆ. ಹೀಗೇ ಕೆಲವಾರು ದಿನಗಳವರೆಗೂ ಕೃಷ್ಣ ಕೊಳಲು ನುಡಿಸುತ್ತಾ, ನರ್ತಿಸುತ್ತಿದ್ದನಂತೆ. ಕೊನೆಗೆ ನವಿಲುಗಳು ಬಳಲಿ ಸುಮ್ಮನಾದವಂತೆ.

ಕೊನೆಗೂ ಒಂದು ದಿನ ಕೃಷ್ಣ ನೃತ್ಯ ನಿಲ್ಲಿಸಿದಾಗ ನವಿಲುಗಳು ಅವನ ಪಾದಕ್ಕೆರಗಿ ಸದಾ ನಿನ್ನ ಜತೆಗಿರಲು ನಮಗೂ ಅವಕಾಶ ಕೊಡಬೇಕು ಎಂದು ಪ್ರೀತಿಯಿಂದ ಕೃಷ್ಣನಿಗೆ ತಮ್ಮ ಅಂದವಾದ ಗರಿಗಳನ್ನು ನೀಡಿದವಂತೆ. ಇದನ್ನು ನೋಡಿ ಖುಷಿಯಾದ ಕೃಷ್ಣನು ಆ ನವಿಲುಗಳನ್ನು ಹೆಕ್ಕಿ ತನ್ನ ಮುಡಿಗೇರಿಸಿಕೊಂಡನಂತೆ. ಅಂದಿನಿಂದ ಕೃಷ್ಣನ ತಲೆಯಲ್ಲಿ ಸದಾ ನವಿಲುಗರಿ ಇರುತ್ತದೆ ಎಂಬ ಪ್ರತೀತಿಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ