Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 19 ಮೇ 2019 (07:14 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ನಿರಾಸೆಯಾಗಬಹುದು. ಸಾಮಾಜಿಕ ಕೆಲಸಗಳಿಗೆ ಹಿತಶತ್ರುಗಳಿಂದ ಅಡ್ಡಿ ಆತಂಕ ಎದುರಾಗಲಿದೆ. ಸಾಹಿತ್ಯ, ಕಲಾ ಕ್ಷೇತ್ರದಲ್ಲಿರುವವರಿಗೆ ಮುನ್ನಡೆ.

ವೃಷಭ: ಅಧಿಕಾರಿ ವರ್ಗದವರಿಗೆ ಕಾರ್ಯದೊತ್ತಡ ಹೆಚ್ಚಬಹುದು. ಮಹಿಳೆಯರಿಂದ ಅಪವಾದದ ಭೀತಿ ಇರಲಿದೆ. ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ವೃತ್ತಿರಂಗದಲ್ಲಿ ವಿನಾಕಾರಣ ಸಹೋದ್ಯೋಗಿಗಳಿಂದ ನಿಷ್ಠುರಕ್ಕೊಳಗಾಗುವಿರಿ. ಕೆಲಸ ಕಾರ್ಯಗಳಿಗೆ ವಿಘ್ನ ತೋರಿಬಂದೀತು. ಆದರೆ ಧನಾಗಮನಕ್ಕೆ ಕೊರತೆಯಾಗದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಲಾಭ.

ಕರ್ಕಟಕ: ಹಳೆ ಸಂಬಂಧಗಳು ಹುಡುಕಿಕೊಂಡು ಬರಲಿದೆ. ಸಂಗಾತಿಗೆ ಚಿನ್ನಾಭರಣ ಖರೀದಿಸುವಿರಿ. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸ ನಿಮಿತ್ತ ವಿದೇಶ ಪ್ರಯಾಣ ಯೋಗವಿದೆ.

ಸಿಂಹ: ತಂದೆ ಮಕ್ಕಳೊಡನೆ ಕಲಹವಾದೀತು. ಇಷ್ಟು ದಿನ ಕೂಡಿಟ್ಟ ಹಣ ನಾನಾ ರೀತಿಯಲ್ಲಿ ಖರ್ಚಾಗಲಿದೆ. ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಬಡ್ತಿ ಯೋಗವಿದೆ. ಆರೋಗ್ಯ ಹದಗೆಡಬಹುದು, ಎಚ್ಚರಿಕೆ ಅಗತ್ಯ.

 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಕಿರಿ ಕಿರಿ ತಪ್ಪದು. ಯಾವುದೋ ಮಹತ್ವದ ಕಾರ್ಯಕ್ಕೆ ಕೈ ಹಾಕಬೇಕೆಂದಿದ್ದರೂ ಆರ್ಥಿಕ ಅಡಚಣೆಯಿಂದ ನೆರವೇರದು. ಉದ್ಯೋಗಕ್ಕಾಗಿ ಅಲೆದಾಟ ನಡೆಸಬೇಕು.

ತುಲಾ: ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಸಾಂಸಾರಿಕವಾಗಿ ಸುಖ, ಶಾಂತಿ ವೃದ್ಧಿಯಾಗಲಿದೆ. ಸಂಗಾತಿಯೊಂದಿಗೆ ಸುಮಧುರ ಕ್ಷಣ ಕಳೆಯುವಿರಿ. ನೂತನ ದಂಪತಿಗಳು ಪ್ರವಾಸ ತೆರಳುವರು.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಪೈಪೋಟಿ ಅನುಭವಕ್ಕೆ ಬರುವುದು. ಹಾಗಿದ್ದರೂ ನಿಮ್ಮ ಮುನ್ನಡೆಗೆ ಯಾರೂ ತಡೆ ನೀಡಲಾಗದು. ಆಗಾಗ ಆರೋಗ್ಯ ಸಮಸ್ಯೆ ಕಂಡುಬರಬಹುದು. ವ್ಯವಹಾರದಲ್ಲಿ ಕೊಂಚ ಹಿನ್ನಡೆ ಕಾಣಬಹುದು.

ಧನು: ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಎದುರಾಗಬಹುದು. ಆತ್ಮಸ್ಥೈರ್ಯದಿಂದ ಎದುರಿಸಬೇಕಾಗಬಹುದು. ಆರ್ಥಿಕವಾಗಿ ಹಣದ ಮುಗ್ಗಟ್ಟು ಎದುರಿಸಬೇಕಾಗಬಹುದು. ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ.

ಮಕರ: ವ್ಯಾಪಾರ, ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಲಾಭವಿರಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಹಿರಿಯರ ಆರೋಗ್ಯ ಹದಗೆಡಬಹುದು, ಎಚ್ಚರಿಕೆ ಅಗತ್ಯ. ಕಾರ್ಯ ನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಕುಂಭ: ಸಂಗಾತಿಯಿಂದ ಮಾನಸಿಕ ಕಿರಿ ಕಿರಿ ತಪ್ಪದು. ಮಕ್ಕಳ ವಿಚಾರಕ್ಕೆ ಚಿಂತೆಯಾಗುವುದು. ಯಾವುದೇ ಕೆಲಸ ಕಾರ್ಯಗಳನ್ನು ವಿವೇಚನೆಯಿಂದ ಮಾಡುವುದು ಮುಖ್ಯ. ಕೌಟುಂಬಿಕ ಜವಾಬ್ಧಾರಿ ನಿಭಾಯಿಸಲು ಓಡಾಟ ನಡೆಸಬೇಕಾಗುತ್ತದೆ.

ಮೀನ: ದೈವಾನುಕೂಲ ನಿಮ್ಮ ಮೇಲಿದ್ದು, ಕೈಗೊಂಡ ಕಾರ್ಯಗಳು ನೆರವೇರುವುದು. ಕೆಳ ಹಂತದ ನೌಕರ ವರ್ಗದವರಿಗೆ ಉದ್ಯೋಗದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಕೌಟುಂಬಿಕವಾಗಿ ನಿಮ್ಮ ಮಾತುಗಳು ಇತರರಿಗೆ ಪಥ್ಯವಾಗದೇ ಇರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

Share this Story:

Follow Webdunia kannada

ಮುಂದಿನ ಸುದ್ದಿ

ಪಾತ್ರೆಗಳನ್ನು ದಾನ ಮಾಡಿದರೆ ಶುಭವೋ? ಅಶುಭವೋ?