Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಬುಧವಾರ, 3 ಏಪ್ರಿಲ್ 2019 (09:00 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳು ಹೇಗಿವೆ ಎಂದು ತಿಳಿದುಕೊಳ್ಳಲು ಇಲ್ಲಿ ನೋಡಿ.


ಮೇಷ: ವ್ಯಕ್ತಿಯ ಪೂರ್ವಾಪರ ವಿಚಾರಿಸದೇ ಹಣಕಾಸಿನ ವ್ಯವಹಾರ ಮಾಡಲು ಹೋಗಬೇಡಿ. ಕೊಟ್ಟ ಹಣ ವಾಪಸ್ಸು ಬರದೇ ಇರಬಹುದು. ಸಂಗಾತಿಯ ಸಲಹೆಯಿಲ್ಲದೇ ಯಾವ ಕೆಲಸಕ್ಕೂ ಕೈ ಹಾಕಬೇಡಿ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆಯಿದೆ.

ವೃಷಭ: ಇನ್ನೇನು ಯಶಸ್ಸು ಕೈಗೆ ಸಿಗುತ್ತದೆ ಎಂದಾಗ ಕೈ ಜಾರಿ ಹೋಗಿ ನಿರಾಶೆ ಅನುಭವಿಸಬೇಕಾಗುತ್ತದೆ. ತಾಳ್ಮೆ ಬೇಕು. ಕಷ್ಟಗಳು ಬಂದಾಗ ಮನೆಯ ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ. ಯಾವುದೇ ಕೆಲಸಕ್ಕೂ ಮೊದಲು ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿ ಮುನ್ನಡೆಯಿರಿ.

ಮಿಥುನ: ಕಾಕತಾಳೀಯವೇ ಆದರೂ ನೀವು ಕನಸಿನಲ್ಲಿ ಕಂಡ ವಿಚಾರಗಳು ನಿಜವಾಗಲಿವೆ. ಅಂದುಕೊಂಡ ಕಾರ್ಯಗಳು ನೆರವೇರುವುದು. ಅನಿರೀಕ್ಷಿತವಾಗಿ ಇಷ್ಟಮಿತ್ರರನ್ನು ಭೇಟಿಯಾಗುವಿರಿ. ಯಾವುದೇ ಜಠಿಲ ಸಮಸ್ಯೆಯೇ ಆಗಿದ್ದರೂ ದೇವರ  ಅನುಗ್ರಹ ನಿಮ್ಮ ಮೇಲಿದ್ದು ಕಷ್ಟದಿಂದ ಪಾರಾಗುವಿರಿ.

ಕರ್ಕಟಕ: ಆದಾಯ ಹೆಚ್ಚಿಸಲು ನಾನಾ ಮಾರ್ಗ ಹುಡುಕುವಿರಿ. ಷೇರು, ವ್ಯವಹಾರ ಇತ್ಯಾದಿಗಳಲ್ಲಿ ಬಂಡವಾಳ ಹೂಡುವಿರಿ. ಜಾಣ್ಮೆಯಿಂದ ಯೋಜನೆ ರೂಪಿಸಿದರೆ ಕೈಗೊಂಡ ಕೆಲಸಗಳು ಸಫಲವಾಗಿ ಆರ್ಥಿಕವಾಗಿ ಸಬಲರಾಗುವಿರಿ. ನಿರುದ್ಯೋಗಿಗಳ ಸಮಸ್ಯೆ ನಿವಾರಣೆಯಾಗುವುದು. ವಿದ್ಯಾರ್ಥಿಗಳು ಪ್ರಗತಿ ಕಾಣುವರು.

ಸಿಂಹ: ನಿಮ್ಮ ಮಾತೇ ನಿಮಗೆ ಇಂದು ಶತ್ರುವಾಗಲಿದೆ. ನಿಮ್ಮ ಮುಂಗೋಪ, ದುಡುಕಿನ ವರ್ತನೆಯಿಂದ ಸಂಗಾತಿ ಜತೆಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಆದರೆ ಇದು ಗಂಭೀರವಾಗದಂತೆ ನೋಡಿಕೊಳ್ಳಿ. ಕೃಷಿ ಕ್ಷೇತ್ರದಲ್ಲಿರುವವರು ಲಾಭ ಗಳಿಸುವರು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕನ್ಯಾ: ನಿಮ್ಮ ಬೆನ್ನ ಹಿಂದಿರುವ ಹಿತಶತ್ರುಗಳನ್ನು ಗುರುತಿಸದೇ ತಪ್ಪು ಮಾಡುವಿರಿ. ನಿಮಗೆ ನಿಜವಾದ ಹಿತ ಬಯಸುವವರು ಯಾರು ಎಂದು ಅರಿಯಲು ಯತ್ನಿಸಿ. ಯಾವುದೇ ವಿಚಾರವಾದರೂ ದೃಢ ನಿರ್ಧಾರ ಕೈಗೊಳ್ಳಲು ವಿಫಲರಾಗುವಿರಿ. ಯಾರದೋ ಒಳ ಜಗಳ, ಸಮಸ್ಯೆಗಳಿಗೆ ನೀವು ತಲೆಕೆಡಿಸಿಕೊಳ್ಳುವಿರಿ.

ತುಲಾ: ಕಚೇರಿಯಲ್ಲಿ ಮೇಲಧಿಕಾರಿಗಳ ಅಸಮಾಧಾನ, ಕಿರಿ ಕಿರಿ ಇದ್ದರೂ ಅದು ನಿಮ್ಮ ಕೆಲಸಕ್ಕೆ ಬಾಧಿಸದು. ಉದ್ಯೋಗದಲ್ಲಿ ನಿಮ್ಮೆ ಕೆಲಸಕ್ಕೆ ಮನ್ನಣೆ ಸಿಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿಗಳನ್ನು ಹೊರಬೇಕಾಗುತ್ತದೆ. ಕೈಗೊಂಡ ಕಾರ್ಯಗಳಿಗೆ ಫಲ ಸಿಗುವುದು.

ವೃಶ್ಚಿಕಾ: ಸಿಟ್ಟಿನ ಭರದಲ್ಲಿ ಮೂಗು ಕೊಯ್ದುಕೊಂಡರೆ ಮತ್ತೆ ಜೋಡಿಸಲಾಗದು ಎಂಬುದನ್ನು ತಿಳಿಯಿರಿ. ನೀವು ಅಂದುಕೊಂಡಂತೆ ಕೆಲಸ ಸಾಗುತ್ತಿಲ್ಲ ಎಂದು ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ತಾಳಿದವನು ಬಾಳಿಯಾನು ಎಂಬುದನ್ನು ಮರೆಯಬೇಡಿ. ಮಕ್ಕಳ ಹಠದ ಸ್ವಭಾವ ಚಿಂತೆಗೀಡುಮಾಡುವುದು.

ಧನು: ಕೌಟುಂಬಿಕವಾಗಿ ಕೆಲವೊಂದು ವಿಚಾರಗಳು ನಿಮ್ಮನ್ನು ಚಿಂತೆಗೀಡುಮಾಡಲಿದೆ. ಮಕ್ಕಳ ವಿಚಾರದಲ್ಲಿ ಚಿಂತೆ ಹೆಚ್ಚಾಗುವುದು. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗುವುದು. ಇಂತಹ ಕಿರಿ ಕಿರಿಗಳಿಂದ ಮುಕ್ತಿ ಪಡೆಯಲು ದೇವತಾ ಪ್ರಾರ್ಥನೆ ಮಾಡಿ. ದಿನದಂತ್ಯಕ್ಕೆ ಶುಭ ಫಲ ಸಿಗುವುದು.

ಮಕರ: ಉದ್ಯೋಗಕ್ಕೆ ಕುತ್ತು ಬರುವಂತಹ ಸಮಸ್ಯೆಗಳು ಬರುವುದು. ಹೀಗಾಗಿ ಉದ್ಯೋಗ ಉಳಿಸಿಕೊಳ್ಳಲು ಕಸರತ್ತು ಮಾಡುವಿರಿ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಕಂಡುಕೊಳ್ಳುವರು. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ.

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡದಿಂದ ದೇಹ ಹೈರಾಣಾಗುವುದು. ಮೇಲಧಿಕಾರಿಗಳ ಅವಕೃಪೆ ಚಿಂತೆಗೆ ಕಾರಣವಾಗಲಿದೆ. ಆದರೆ ಆರ್ಥಿಕವಾಗಿ ನಿಮ್ಮ ಆದಾಯಕ್ಕೆ ಕೊರತೆಯಿಲ್ಲ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗುವಿರಿ. ಸಂಗಾತಿಯ ಮನಸ್ಸಿಗೆ ಸಂತೋಷ ನೀಡುವ ಕೆಲಸ ಮಾಡುವಿರಿ.

ಮೀನ: ಯಾವುದೋ ಅನಗತ್ಯ ಕೊರಗಿನಲ್ಲಿ ದಿನ ಕಳೆಯುವಿರಿ. ಆದರೆ ಉದಾಸೀನ ಪ್ರವೃತ್ತಿ ಬಿಟ್ಟು ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ದೈವಾನುಕೂಲದಿಂದ ಉತ್ತಮ ಫಲ ಪಡೆಯುವಿರಿ. ಯಂತ್ರೋಪಕರಣಗಳ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಫಲವಿದೆ. ದಿನಂತ್ಯಕ್ಕೆ ಶುಭ ಸುದ್ದಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನವಿಲುಗರಿಯನ್ನು ಮನೆಯ ಈ ಸ್ಥಳದಲ್ಲಿ ಇಟ್ಟರೆ ಎಂದೂ ಕಾಡಲ್ಲ ಆರ್ಥಿಕ ಸಮಸ್ಯೆ