Select Your Language

Notifications

webdunia
webdunia
webdunia
webdunia

ತುಳಸಿ ಪೂಜೆಯನ್ನು ಹೀಗೆ ಮಾಡಿದರೆ ಧನಾಗಮನವಾಗುತ್ತದೆ!

ಜ್ಯೋತಿಷ್ಯ
ಬೆಂಗಳೂರು , ಭಾನುವಾರ, 31 ಮಾರ್ಚ್ 2019 (08:49 IST)
ಬೆಂಗಳೂರು: ತುಳಸೀ ದೇವಿಯ ಕೃಪಾಕಟಾಕ್ಷ ನಮ್ಮ ಮೇಲಿದ್ದರೆ, ಮನೆಯಲ್ಲಿ ದಾರಿದ್ರ್ಯಕ್ಕೆ ಜಾಗವಿರದು. ಸಕಲ ಐಶ್ವರ್ಯ ಪ್ರಾಪ್ತಿಗಾಗಿ ತುಳಸಿಯನ್ನು ಪೂಜಿಸಬೇಕು.


ಪ್ರತೀ ವರ್ಷದ ಕಾರ್ತಿಕ ಮಾಸದ ಶುದ್ಧ ದ್ವಾದಶಿ ದಿನ ತುಳಸಿ ಪೂಜೆ ಮಾಡಲೇಬೇಕು. ಕಾರ್ತಿಕ ಮಾಸದಲ್ಲಿ ತುಳಸಿ ಗಿಡದ ಸುತ್ತಲೂ ನೆಲ್ಲಿಕಾಯಿ ದೀಪವನ್ನು ಬೆಳಗಿಸಿ ಪೂಜಿಸಿದರೆ  ಹಣದ ಸಮಸ್ಯೆಗಳು ದೂರವಾಗುವುದು.

ತುಳಸಿ ಗಿಡ ಮನೆಯ ಮುಂದಿದ್ದರೆ ಅದು ನೆಲದಿಂದ ಸ್ವಲ್ಪ ಎತ್ತರದಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಸ್ನಾನಕ್ಕಿಂತ ಮೊದಲು ಮತ್ತು ಊಟವಾದ ನಂತರ ತುಳಸಿ ಎಲೆ ಬಿಡಿಸಬಾರದು.

ತುಳಸಿ ಪೂಜೆ ಮಾಡುವಾಗ ಸಿಹಿ ನೈವೇದ್ಯ ಮಾಡುವುದನ್ನು ಮರೆಯಬೇಡಿ. ಲಕ್ಷ್ಮೀ ಪೂಜೆ ಮಾಡುವವರು ಮೊದಲು ತುಳಸಿ ಪೂಜೆ ಮಾಡಿದರೆ ಫಲ ಹೆಚ್ಚು. ಇಂತಹ ಶ್ರೇಯಸ್ಕರವಾದ ತುಳಸಿಯನ್ನು ನಿತ್ಯವೂ ಪೂಜಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ