Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 2 ಏಪ್ರಿಲ್ 2019 (05:29 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ:  ಅಧಿಕಾರಿ ವರ್ಗದವರು ಕಾರ್ಯದೊತ್ತಡದಲ್ಲಿರುವರು. ರಾಜಕೀಯ ಕ್ಷೇತ್ರದಲ್ಲಿರುವವರ ಸ್ಥಾನ ಮಾನ ಹೆಚ್ಚಲಿದೆ. ಆರೋಗ್ಯ ಭಾಗ್ಯ ಸುಧಾರಿಸುವುದು. ಆದಾಯಕ್ಕೆ ಏನೂ ಕೊರತೆಯಾಗದು. ಆದರೆ ಬಾಕಿ ಹಣ ಪಾವತಿ ಕೆಲಸಗಳು ಚಿಂತೆಗೀಡುಮಾಡಲಿವೆ.

ವೃಷಭ: ಆರ್ಥಿಕವಾಗಿ ಸಾಕಷ್ಟು ಲಾಭ ಗಳಿಸುವಿರಿ. ಇದರಿಂದ ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಓಡಾಟ ನಡೆಸುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಮಿಥುನ: ನಿರ್ಧಾರ ಕೈಗೊಳ್ಳುವಾಗ ಮಾನಸಿಕ ಧ್ವಂದ್ವಗಳು ಕಾಡಲಿವೆ. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ವಾಹನ ಚಲಾಯಿಸುವಾಗ ಅಪಘಾತವಾಗದಂತೆ ಎಚ್ಚರವಹಿಸಿ. ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡುವುದು ಮುಖ್ಯ.

ಕರ್ಕಟಕ: ಪಾಲು ಬಂಡವಾಳ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ಉದ್ಯೋಗ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸುವಿರಿ. ನೀವು ಅಂದುಕೊಂಡ ಕಾರ್ಯಗಳಿಗೆ ದೈವಾನುಗ್ರಹವಿದ್ದು, ನೆರವೇರುವುದು. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಸಿಂಹ: ಆಕಸ್ಮಿಕವಾಗಿ ಸಿಗುವ ಮಿತ್ರನಿಂದ ಬಹುದಿನಗಳ ಸಮಸ್ಯೆಗೆ ಪರಿಹಾರ ಸಿಗಲಿದೆ. ಆಸ್ತಿ ವಿವಾದಗಳ ಬಗ್ಗೆ ಕೋರ್ಟ್ ಮೆಟ್ಟಿಲೇರಿದರೆ ಜಯ ಸಿಗದು. ಹಾಗಾಗಿ ಹಿರಿಯ ಮಧ್ಯಸ್ಥಿಕೆ ಮಾಡುವುದು ಒಳ್ಳೆಯದು. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ.

ಕನ್ಯಾ: ಕುಟುಂಬದಲ್ಲಿ ಯಾವುದೋ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿ ಮನಸ್ಸಿಗೆ ಬೇಸರ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಉದ್ಯೋಗ ಬದಲಾವಣೆಗೆ ಚಿಂತನೆ ಮಾಡುವಿರಿ. ಸ್ತ್ರೀಯರಿಂದ ಒಳ್ಳೆಯದಾಗುವುದು.

ತುಲಾ: ಶುಭ ಮಂಗಲ ಕಾರ್ಯಗಳಿಗೆ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ಆದಾಯವಿದ್ದಷ್ಟೇ ಖರ್ಚೂ ಹೆಚ್ಚುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ‍್ಯತೆಯಿದೆ. ಅನಿರೀಕ್ಷಿತವಾಗಿ ಬರುವ ಅತಿಥಿಗಳಿಂದ ಸಂತಸವಾಗುವುದು.

ವೃಶ್ಚಿಕ: ಕುಟುಂಬದಲ್ಲಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ. ಹಿರಿಯರ ಆರೋಗ್ಯದ ಸಂಬಂಧ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.

ಧನು: ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಹೊಸ ವಸ್ತ್ರಾಭರಣ ಖರೀದಿ ಯೋಗವಿದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಆರೋಗ್ಯ ಸುಧಾರಿಸುವುದು.

ಮಕರ: ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವುದು. ಸಂಗಾತಿಯೊಂದಿಗೆ ಸುಂದರ ಸಮಯ ಕಳೆಯುವಿರಿ. ಕಿರು ಪ್ರವಾಸವನ್ನೂ ಮಾಡುವಿರಿ. ಕೈಗೊಂಡ ಕಾರ್ಯದಲ್ಲಿ ಜಯ ಸಿಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.

ಕುಂಭ: ಖರ್ಚು ವೆಚ್ಚಗಳು ಅಧಿಕವಾಗುವುದು. ನಿಮಗೆ ಸಂಬಂಧಪಡದ ವಿಚಾರಗಳಲ್ಲಿ ಮೂಗು ತೂರಿಸಿ ವಿನಾಕಾರಣ ಅಪವಾದಕ್ಕೀಡಾಗುವಿರಿ. ವೃತ್ತಿ ರಂಗದಲ್ಲಿ ಅಧಿಕಾರಿಗಳ ಪ್ರಶಂಸೆಗೊಳಗಾಗುವಿರಿ.

ಮೀನ: ಮನೋಕಾಮನೆ ಪೂರೈಕೆಗಾಗಿ ಕುಲದೇವರ ಪ್ರಾರ್ಥನೆ ಮಾಡಬೇಕಾಗುತ್ತದೆ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಮಹಿಳೆಯರಲ್ಲಿ ಕೆಲಸದ ಬಗ್ಗೆ ಉದಾಸೀನ ಪ್ರವೃತ್ತಿ ಕಂಡುಬರಲಿದೆ. ಮಕ್ಕಳಿಂದ ಸಂತಸ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ದರಿದ್ರ ಯೋಗ ಕಳೆಯಲು ಈ ಪೂಜೆ ಮಾಡಿ