Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 19 ಮಾರ್ಚ್ 2019 (08:40 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ದಿನ ನಿಮ್ಮದಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಚಿಂತೆಯಾಗುವುದು. ಆರ್ಥಿಕವಾಗಿ ಸಮಾಧಾನಕರ ದಿನ. ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಉದ್ಯೋಗ ಸಿಗಲಿದೆ.

ವೃಷಭ: ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ನೆರೆಹೊರೆಯವರೊಂದಿಗೆ ಕಿರಿ ಕಿರಿಯಾಗುವುದು. ಅಂದುಕೊಂಡ ಕಾರ್ಯಗಳಿಗೆ ಹಣದ ಅಡಚಣೆಯಾಗುವುದು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ಖರ್ಚು ವೆಚ್ಚದಲ್ಲಿ ಹಿಡಿತವಿರಲಿ.

ಮಿಥುನ: ಹಣ ಗಳಿಕೆಯ ನಾನಾ ಮಾರ್ಗಗಳ ಬಗ್ಗೆ ಚಿಂತನೆ ಮಾಡುವಿರಿ. ಸಂಗಾತಿಯ ಸಹಕಾರ ಸಿಕ್ಕಿ ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವುದು. ಆದರೆ ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇರುವುದು.

ಕರ್ಕಟಕ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿ, ಮುನ್ನಡೆ ಯೋಗವಿದೆ. ಸಣ್ಣ ಮಟ್ಟಿನ ಆರೋಗ್ಯ ಸಮಸ್ಯೆ ಕಾಡಲಿದೆ.

ಸಿಂಹ: ಖರ್ಚುಗಳು ಅಧಿಕವಾಗಿದ್ದರೂ, ವ್ಯಾಪಾರ, ವ್ಯವಹಾರಗಳಿಂದ ಲಾಭ ಗಳಿಸುವಿರಿ. ನಯವಂಚಕರು ಬೆನ್ನ ಹಿಂದೆಯೇ ಇರುವರು. ಎಚ್ಚರವಾಗಿರಬೇಕು. ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸುವಿರಿ.

ಕನ್ಯಾ: ಕಷ್ಟದ ಸಂದರ್ಭದಲ್ಲಿ ಮಿತ್ರರಿಂದ ಸಹಾಯ ದೊರಕಲಿದೆ. ಸ್ತ್ರೀಯರಿಂದ ಅಪವಾದ ಭೀತಿಯಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.

ತುಲಾ: ಕೃಷಿ ಕ್ಷೇತ್ರ, ವ್ಯಾಪಾರಿಗಳಿಗೆ ನಿವ್ವಳ ಲಾಭ ಸಿಗಲಿದೆ. ಆದರೆ ನೀರಿಗಾಗಿ ಪರದಾಟ ತಪ್ಪದು. ನೂತನ ದಂಪತಿಗಳು ರಸಮಯ ಕ್ಷಣ ಕಳೆಯುವರು. ಬಹುದಿನಗಳಿಂದ ಬಾಕಿಯಿದ್ದ ಹರಕೆ ತೀರಿಸಲು ತೀರ್ಥ ಯಾತ್ರೆ ಕೈಗೊಳ್ಳುವಿರಿ.

ವೃಶ್ಚಿಕ: ಸ್ವ ಉದ್ಯೋಗ ಮಾಡುವವರಿಗೆ, ಉದ್ಯಮಿಗಳಿಗೆ ವ್ಯವಹಾರದಲ್ಲಿ ನಿರೀಕ್ಷಿತ ಮುನ್ನಡೆ ಲಭಿಸುವುದು. ಆದರೆ ಕೌಟುಂಬಿಕವಾಗಿ ಮೂಡಿದ ಭಿನ್ನಾಬಿಪ್ರಾಯಗಳನ್ನು ಬಗೆಹರಿಸುವ ಜವಾಬ್ಧಾರಿ ನಿಮ್ಮ ಹೆಗಲಿಗೇರಲಿದೆ. ತಾಳ್ಮೆಯಿಂದ ಹೆಜ್ಜೆಯಿಡಬೇಕು.

ಧನು: ಮಕ್ಕಳಿಂದ ಸಂತೋಷದ ವಾರ್ತೆ ಸಿಗಲಿದೆ. ಆದರೆ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚು ಕಮ್ಮಿಯಾದೀತು. ಭಯ ಬೇಡ. ಮುಂದೆ ಒಳ್ಳೆಯ ದಿನಗಳಿವೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಮಕರ: ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ನಾನಾ ಮೂಲಗಳಿಂದ ಧನ ಲಾಭವಾಗಲಿದೆ. ಅನಿರೀಕ್ಷಿತವಾಗಿ ನೆಂಟರ ಆಗಮನವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು.

ಕುಂಭ:  ಮನೆಯಲ್ಲಿ ವಿವಾಹ ವಯಸ್ಕರಿದ್ದರೆ ಅವರ ಮದುವೆ ಸಂಬಂಧ ಓಡಾಟ ನಡೆಸಬೇಕಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳಿಗೆ ಖರ್ಚು ವೆಚ್ಚವಾಗಲಿದೆ.

ಮೀನ: ಮನೆಯಲ್ಲಿ ಎಷ್ಟೇ ಸಂತೋಷದಾಯಕ ವಾತಾವರಣವಿದ್ದರೂ ಏನೋ ಒಂದು ರೀತಿಯ ಮಾನಸಿಕ ಕ್ಲೇಶ ಕಾಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅಭಿವೃದ್ಧಿಗೆ ಮೇಲಧಿಕಾರಿಗಳೇ ಅಸೂಯೆ ಪಡುವರು. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆಂಜನೇಯನನ್ನು ಈ ರೂಪದಲ್ಲಿ ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ