Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಬೆಂಗಳೂರು , ಗುರುವಾರ, 14 ಮಾರ್ಚ್ 2019 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಮುನ್ನಡೆಯಿರುತ್ತದೆ. ಆದರೆ ಸಹೋದ್ಯೋಗಿಗಳಿಂದ ಕಿರಿ ಕಿರಿ ತಪ್ಪದು. ದೂರ ಸಂಚಾರ ಮಾಡುವುದರಿಂದ ಕಾರ್ಯ ಸಿದ್ಧಿ. ವಿದ್ಯಾರ್ಥಿಗಳಿಗೆ ಪರಿಶ್ರಮದ ಅಗತ್ಯವಿದೆ.

ವೃಷಭ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು.

ಮಿಥುನ: ಪ್ರಯತ್ನಕ್ಕೆ ತಕ್ಕ ಫಲ ಸಿಗದೇ ಮನಸ್ಸಿಗೆ ಬೇಸರವಾಗುವುದು. ಆದರೆ ನಿರಾಶೆ ಬೇಡ. ಮಿತ್ರರಿಂದ ಸಹಕಾರ ದೊರೆಯುವುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಆದರೆ ದಾಂಪತ್ಯದಲ್ಲಿ ಕಲಹದ ಅಪಾಯವಿದೆ.

ಕರ್ಕಟಕ: ಉದ್ಯಮಿಗಳಿಗೆ ಶುಭ ದಿನ. ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ. ಸಂತಾನ ಭಾಗ್ಯ ಬಯಸುವ ದಂಪತಿಗಳಿಗೆ ಶುಭ ಸುದ್ದಿ. ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಿ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡವಿರಲಿದೆ. ಸಂಗಾತಿಯ ಆರೋಗ್ಯ ಹದಗೆಡುವುದು. ಮನೆ ನಿರ್ವಹಣೆಗಾಗಿ ಅಧಿಕ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ನೆಮ್ಮದಿಗಾಗಿ ಕುಲದೇವರ ಪ್ರಾರ್ಥಿಸಿ.

ಕನ್ಯಾ: ಮಾತಿನ ಮೇಲೆ ನಿಗಾ ಇರಲಿ. ಬಾಯ್ತಪ್ಪಿ ಆಡುವ ಮಾತಿನಿಂದ ಅಪವಾದಕ್ಕೆ ಗುರಿಯಾಗುವಿರಿ. ನಿಮ್ಮ ಪರಿಶ್ರಮ ಕಂಡು ಮೇಲಧಿಕಾರಿಗಳೇ ಅಸೂಯೆ ಪಡುವರು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ತುಲಾ: ಕಷ್ಟದ ಸಮಯದಲ್ಲಿ ಮಿತ್ರರಿಂದ ಸಹಾಯ ದೊರೆಯುವುದು. ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಆರ್ಥಿಕ ಲಾಭ ಗಳಿಸುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಬರಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡಿದ ಸಣ್ಣ ತಪ್ಪಿಗೆ ಮೇಲಧಿಕಾರಿಯಿಂದ ಬೈಸಿಕೊಳ್ಳಬೇಕಾಗುತ್ತದೆ. ಹಿತ ಶತ್ರುಗಳು ನಿಮ್ಮ ವಂಚಿಸಲು ಕಾಯುತ್ತಿರುವರು. ಆದರೆ ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭ ಸುದ್ದಿ.

ಧನು: ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಆದರೆ ವಾಹನ, ವಸ್ತ್ರ ಇತ್ಯಾದಿ ಖರೀದಿಗೆ ಇಂದು ಮುಂದಾಗಬೇಡಿ. ಅನಗತ್ಯ ಮಾತುಗಳಿಗೆ ಕಿವಿಗೊಡಬೇಡಿ.

ಮಕರ: ಹಿರಿಯರು ತೀರ್ಥ ಯಾತ್ರೆ ಕೈಗೊಳ್ಳುವರು. ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆಗಳನ್ನು ತೀರಿಸುವಿರಿ. ಕೆಲವೊಂದು  ವಿಚಾರದಲ್ಲಿ ಸಂಗಾತಿಗಾಗಿ ಇಷ್ಟವಿಲ್ಲದ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಪ್ರೇಮಿಗಳಿಗೆ ಶುಭ ದಿನ.

ಕುಂಭ:  ಯಾವುದೋ ಒಂದು ಬೇಸರ ಮನಸ್ಸಿಗೆ ಕಾಡಿ ಇಂದಿನ ಕೆಲಸಗಳನ್ನು ಹಾಳುಗೆಡವುದು. ವಿನಾಕಾರಣ ಅಪವಾದಕ್ಕೆ ಗುರಿಯಾಗುವಿರಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸದ ಭಾಗ್ಯವಿದೆ. ತಾಳ್ಮೆ ಅಗತ್ಯ.

ಮೀನ: ನಿರುದ್ಯೋಗಿಗಳಿಗೆ ವಿದ್ಯೆಗೆ ತಕ್ಕ ಉದ್ಯೋಗ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವಿರಿ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಆರ್ಥಿಕವಾಗಿ ಮುನ್ನಡೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪಿತಪ್ಪಿಯೂ ಈ ಕಡೆ ಮನೆ ನಿರ್ಮಾಣ ಮಾಡಬೇಡಿ