Publish Date: Mon, 06 May 2019 (07:13 IST)
Updated Date: Mon, 06 May 2019 (07:15 IST)
ಬೆಂಗಳೂರು: ಕೆಲವೊಂದು ಒಳ್ಳೆ ಕೆಲಸಗಳಿಗೆ ಒಳ್ಳೆಯ ಮುಹೂರ್ತ ಎಂದಿದೆ. ಯಾವುದೇ ಕೆಲಸ ಮಾಡುವುದಿದ್ದರೂ ಒಳ್ಳೆಯ ಮುಹೂರ್ತದಲ್ಲಿ ಮಾಡಿದರೆ ಅದು ನಮ್ಮ ಕೈಗೂಡುತ್ತದೆ.
ವಿದ್ಯಾಭ್ಯಾಸ ಎನ್ನುವುದು ಒಬ್ಬ ವ್ಯಕ್ತಿಗೆ ಅತ್ಯಂತ ಪ್ರಮುಖವಾದುದು. ಮಗುವಿಗೆ ವಿದ್ಯಾರಂಭ ಮಾಡುವಾಗ ಉತ್ತಮ ದಿನ ನೋಡಿ ಮಾಡಿದರೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದಬಹುದು.
ವಾರ: ಸೋಮವಾರ, ಬುಧವಾರ, ಗುರುವಾರ.
ಶುಭ ತಿಥಿ: ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ (ಕೃಷ್ಣ ಪಕ್ಷದಲ್ಲಿ ಪಂಚಮಿ ದಾಟಬಾರದು)
ನಕ್ಷತ್ರಗಳು: ಅಶ್ವಿನಿ, ಆರಿದ್ರಾ, ಪುನರ್ವಸು, ಹಸ್ತ, ಚಿತ್ತ, ಸ್ವಾತಿ, ಅನುರಾಧ, ಶ್ರವಣ ಮತ್ತು ರೇವತಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ