Publish Date: Thu, 04 Apr 2019 (09:26 IST)
Updated Date: Thu, 04 Apr 2019 (09:28 IST)
ಬೆಂಗಳೂರು: ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಎಲ್ಲರೂ ಅಲಕ್ಷಿಸುವುದೇ ಹೆಚ್ಚು. ವೃದ್ಧರ ಸೇವೆಗೆ ಹಿಂದೇಟು ಹಾಕುವ ಮೊದಲು ಈ ಲೇಖನವನ್ನು ಓದಿ.
ವೃದ್ಧರಿಗೆ ನಮಸ್ಕಾರ ಮಾಡುವುದರಿಂದ, ಸೇವೆ ಮಾಡುವುದರಿಂದ ನಮಗೆ ಆಯುಷ್ಯ, ವಿದ್ಯೆ, ಯಶಸ್ಸು ಹಾಗೂ ಬಲದ ವೃದ್ಧಿಯಾಗುತ್ತದೆ. ಇದನ್ನು ಸುಭಾಷಿತಗಳಲ್ಲಿ ಹೇಳಲಾಗಿದೆ.
ಯಾವ ದೇವರ ಪೂಜಾದಿಗಳಿಂದ ಎಲ್ಲಾ ಫಲಗಳು ಸಿಗುವುದೋ, ಅದೆಲ್ಲವೂ ನಮ್ಮಂತೇ ಇದ್ದ, ನಮಗಾಗಿ ಪರಿತಪಿಸುವ ಹಿರಿಯ ಜೀವಗಳ ಸೇವೆ ಮಾಡುವುದರಿಂದಲೂ ದೊರಕುತ್ತದೆ. ಹಾಗಾಗಿ ಆ ಭಾಗ್ಯವನ್ನು ಕಲ್ಪಿಸಿದ ಶ್ರೀಹರಿಗೆ ನಾವು ಸದಾ ಋಣಿಯಾಗಿರಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ