Select Your Language

Notifications

webdunia
webdunia
webdunia
webdunia

ಪುರಿ ಜಗನ್ನಾಥ ದೇವಾಲಯದಲ್ಲಿನ ವಿಸ್ಮಯಗಳು ನಿಮಗೆ ಗೊತ್ತೇ....!

webdunia
ಬೆಂಗಳೂರು , ಗುರುವಾರ, 14 ಮಾರ್ಚ್ 2019 (15:53 IST)
ಹಿಂದುಗಳ ಪವಿತ್ರ ಸ್ಥಳವೆಂದೇ ಹೆಸರುವಾಸಿಯಾದ ಜಗನ್ನಾಥ ದೇವಾಲಯವು ಆಧ್ಯಾತ್ಮ ಪವಾಡ ವಿಸ್ಮಯಗಳ ಕುರಿತಾದ ವಿಷಯದಲ್ಲಿ ಇಂದಿಗೂ ಭಕ್ತ ಸಮೂಹವನ್ನು ತನ್ನ ಬಳಿಗೆ ಸೆಳೆಯುತ್ತಿದೆ. ಅಲ್ಲಿನ ಪವಾಡಗಳು ಇಂದಿನ ಆಧುನಿಕ ಜಗತ್ತಿನ ತಂತ್ರಜ್ಞಾನಕ್ಕೆ ಸವಾಲಾಗೇ ಪರಿಣಮಿಸಿದೆ.

ಅಷ್ಟೇ ಅಲ್ಲ ಇಲ್ಲಿನ ದೇವಾಲಯದಲ್ಲಿನ ವಿಸ್ಮಯಗಳು ಕೇಳುತ್ತಾ ಹೋದೆರೆ ನಮಗೆ ಇವೆಲ್ಲಾ ಸುಳ್ಳು ಎನಿಸಬಹುದು ಆದರೆ ನಾವು ಖುದ್ದಾಗಿ ಅವುಗಳನ್ನೊಮ್ಮೆ ಪರಿಕ್ಷೀಸಿದಾಗ ಅದು ಸತ್ಯ ಎಂಬುದು ನಮಗೆ ಅರಿವಿಗೆ ಬರುತ್ತದೆ. ಅಷ್ಟಕ್ಕೂ ದೇವಾಲಯ ಹೇಗಿದೆ ಎಂಬುದರ ಸಂಪೂರ್ಣ ವಿವರ ನಿಮಗಾಗಿ ಇಲ್ಲಿದೆ.
 
ಜಗನ್ನಾಥ ದೇವಾಲಯವು ಹಿಂದೂಗಳ ಪವಿತ್ರ ದೇವಾಲಯವಾಗಿದ್ದು, ಇದು ಒಡಿಶಾ ರಾಜ್ಯದ ಪುರಿಯಲ್ಲಿದೆ. ಇದು ಭಾರತದ ಪೂರ್ವ ಕರಾವಳಿ ಪ್ರದೇಶದಲ್ಲಿ ಈ ದೇವಸ್ಥಾನವು ಕಂಡುಬರುತ್ತದೆ. ಈ ದೇವಾಲಯವನ್ನು ಸುಮಾರು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಕೃಷ್ಣ, ಸುಭದ್ರ ಮತ್ತು ಬಲರಾಮರನ್ನು ನಾವು ಕಾಣಬಹುದಾಗಿದೆ. ಇಲ್ಲಿ ಇನ್ನೂ ಒಂದು ವಿಶೇಷವಿದೆ ಸಾಮಾನ್ಯವಾಗಿ ನಾವು ಬೇರೆ ದೇವಾಲಯಗಳಲ್ಲಿ ಮೂರ್ತಿಗಳನ್ನು ಕಲ್ಲಿನಿಂದಲೋ ಇಲ್ಲವೇ ಪಂಚಲೋಹ ಮೂರ್ತಿಯನ್ನು ನಾವು ನೋಡಿರುತ್ತೇವೆ ಆದರೆ ಇಲ್ಲಿನ ದೇವಸ್ಥಾನದಲ್ಲಿ ಮರದಿಂದ ಮಾಡಿದ ದೇವರ ಮೂರ್ತಿಗಳಿಗೆ ಪೂಜೆಗಳನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲ ಇದನ್ನು ಭಗವಾನ್ ಬ್ರಹ್ಮದೇವರೇ ಬಂದು ಮರದ ಪ್ರತಿಮೆಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರೆಂತಲೂ ಹೇಳಲಾಗುತ್ತದೆ. ಪ್ರಸುತ್ತ ಲೇಖನದಲ್ಲಿ ಈ ಪುರಿ ಜಗನ್ನಾಥನ ದೇವಾಲಯದ ಬಗ್ಗೆ ನಿಮಗೆ ತಿಳಿಯದ ಕೆಲವು ಕೂತೂಹಲಕಾರಿ ವಿಷಯಗಳ ಕುರಿತು ಮಾಹಿತಿ ತಿಳಿದುಕೊಳ್ಳೋಣ.
 
ಪುರಿ ಜಗನ್ನಾಥ ದೇವಾಲಯ ಗೋಪುರದ ಮೇಲೆ ಒಂದು ಧ್ವಜವಿದೆ. ಈ ಧ್ವಜವು ಯಾವಾಗಲೂ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಬಿಸುತ್ತದೆ. ಪ್ರತಿನಿತ್ಯ ಈ ಧ್ವಜವನ್ನು ಪೂಜಾರಿಗಳು ಬದಲಿಸುತ್ತಾರೆ. ಅಷ್ಟೇ ಅಲ್ಲ ಈ ಧ್ವಜವನ್ನು ಬದಲಿಸುವುದು ಒಂದು ದಿನ ತಪ್ಪಿಸಿದರೆ  8 ವರ್ಷಗಳ ಕಾಲ ದೇವಾಲಯದಲ್ಲಿ ಪೂಜೆ ಮಾಡುವ ಹಾಗಿಲ್ಲ ಎಂದು ಹೇಳಲಾಗುತ್ತದೆ ಆದರೆ ಇಲ್ಲಿಯವರೆಗೂ ಒಂದು ಸಲವೂ ಕೂಡಾ ಇದು ತಪ್ಪಿಲ್ಲ ಇದೇಲವೇ ದೈವದ ಅನುಗ್ರಹ.
webdunia
ಜಗನ್ನಾಥನ ದೇವಾಲಯದ ಗೋಪುರದ ಮೇಲೆ ಒಂದು ದಿವ್ಯವಾದ ಸುದರ್ಶನ ಚಕ್ರವಿದೆ. ಈ ಚಕ್ರವು ಸುಮಾರು 20 ಅಡಿ ಎತ್ತರದಲ್ಲಿರಬಹುದು. ಅದನ್ನು ನೀವು ಯಾವುದೇ ಸ್ಥಳದಿಂದ ನೋಡಿದರು ಅದು ನಿಮಗೆ ಎದುರಿಗಿರುವಂತೆ ತೋರುವುದು ಮತ್ತೊಂದು ವಿಶೇಷ. ಅಷ್ಟೇ ಅಲ್ಲ ಈ ಚಕ್ರದ ಇತಿಹಾಸವು ಯಾರಿಗೂ ತಿಳಿದಿಲ್ಲ. ಈ ಚಕ್ರವು ಅತ್ಯಂತ ಭಾರವಾಗಿದ್ದು ಗೋಪುರದ ಮೇಲ್ಭಾಗದಲ್ಲಿ ಈ ಚಕ್ರವನ್ನು ಹೇಗೆ ಸ್ಥಾಪಿಸಿದರು ಎಂಬುದು ಇಂದಿಗೂ ಬಿಡಿಸಲಾಗದ ವಿಷಯವಾಗಿ ಉಳಿದಿದೆ.
 
ಈ ದೇವಸ್ಥಾನದ ಮತ್ತೊಂದು ಪ್ರಮುಖ ಅಂಶ ಎಂದರೆ ದೇವಸ್ಥಾನದ ಗೋಪುರದ ಮೇಲಿಂದ ಯಾವ ಪಕ್ಷಿ ವಿಮಾನಗಳು ಹಾರಾಡುವುದಿಲ್ಲ ಇದಕ್ಕೆ ವೈಜ್ಞಾನಿಕ ಕಾರಣ ಇದೂವರೆಗೂ ಲಭ್ಯವಾಗಿಲ್ಲ.
 
ಯಾವ ಸಮಯದಲ್ಲಿಯೂ ಈ ದೇವಾಲಯದ ನೆರಳು ಭೂಮಿಯ ಮೇಲೆ ಗೋಚರಿಸುವುದಿಲ್ಲ ಇದು ಆಶ್ಚರ್ಯವಾದರೂ ಸತ್ಯ.
 
ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಆದರೆ ಇದುವರೆಗೂ ಆಹಾರದ ಕೊರತೆಯಾಗಲಿ ಕಂಡುಬಂದಿಲ್ಲ ಮತ್ತು ಯಾವುದೇ ಆಹಾರವು ವ್ಯರ್ಥವಾಗಿಲ್ಲ.
 
ಈ ದೇವಾಲಯದ ಸಮೀಪದಲ್ಲಿ ಒಂದು ಕಡಲ ತೀರವಿದೆ. ದೇವಾಲಯದ ಮುಖ್ಯ ದ್ವಾರಕ್ಕೆ ಬಂದಾಗ ಅಲ್ಲಿ ಸಮುದ್ರದ ಅಲೆಗಳ ಶಬ್ದ ಕೇಳಿಸುತ್ತದೆ ಆದರೆ ಮುಖ್ಯದ್ವಾರವನ್ನು ದಾಟಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸಮುದ್ರವಿದೆ ಎಂದು ನಮಗೆ ಅನಿಸುವುದೇ ಇಲ್ಲ ಮತ್ತೆ ಮರಳಿ ದ್ವಾರದಿಂದ ಹೊರಗೆ ಬಂದಾಗ ಸಮುದ್ರದ ಅಲೆಗಳ ಶಬ್ದ ಕೇಳುತ್ತದೆ.
 
ಜಗನ್ನಾಥನ ದೇವಾಲಯದಲ್ಲಿ ಪ್ರಸಾದವನ್ನು ಕಟ್ಟಿಗೆಯನ್ನು ಬಳಸಿ ಒಲೆಯಲ್ಲಿ ಮಡಿಕೆಯಿಂದ ತಯಾರಿಸಲಾಗುತ್ತದೆ. 7 ಮಡಿಕೆಗಳಿಂದ ಪ್ರಸಾದವನ್ನು ತಯಾರಿಸಲಾಗುತ್ತದೆ. ಒಂದರ ಮೇಲೊಂದರಂತೆ ಆಹಾರ ತುಂಬಿದ ಮಡಿಕೆಗಳನ್ನು ಬೇಯಿಸಲು ಒಲೆಯ ಮೇಲೆ ಇಡಲಾಗುತ್ತದೆ ಅದರಲ್ಲಿ ಮೇಲಿರುವ ಮಡಿಕೆಯ ಆಹಾರ ಮೊದಲು ಬೇಯುತ್ತದೆ ನಂತರ ಉಳಿದೆಲವ್ವೂ ಬೇಯುತ್ತದೆ ಇದುವರೆಗೂ ಯಾವುದೇ ಆಹಾರವು ಹೊತ್ತದೇ ಇರುವುದು ಜಗನ್ನಾಥನ ಪವಾಡ ಎಂದೇ ಹೇಳಲಾಗುತ್ತದೆ.
 
ದೇವರ ಮೂರ್ತಿ ಪ್ರತಿ ವರ್ಷವು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯನ್ನು ಬದಲಾಯಿಸಲಾಗುತ್ತದೆ.
 
ಅಷ್ಟೇ ಅಲ್ಲ ಇಲ್ಲಿ ಪ್ರತಿ ಎಂಟು ವರ್ಷಗಳ ನಂತರ ಉತ್ಸವ ಜರುಗುತ್ತದೆ ಆ ಸಮಯದಲ್ಲಿ ಹಳೆ ಮೂರ್ತಿಯನ್ನು ಬದಲಿಸುತ್ತಾರೆ ಆಸ್ಥಳಕ್ಕೆ ಹೊಸ ಮೂರ್ತಿಯನ್ನು ಇರಿಸುತ್ತಾರೆ. ಹಳೆಯ ವಿಗ್ರಹವನ್ನು ಮಣ್ಣಿನಲ್ಲಿ ಹೂಳಲಾಗುತ್ತದೆ ಇದನ್ನು ನಬಕಳೇವರ ಎಂದು ಕರೆಯಲಾಗುತ್ತದೆ.
 
ಇಲ್ಲಿ ನಡೆಯುವ ಉತ್ಸವಗಳು ತುಂಬಾ ದೊಡ್ಡ ಪ್ರಮಾಣದಲ್ಲಿ ಜರಗುತ್ತವೆ ಇಲ್ಲಿ ಕೃಷ್ಣ ಸುಭದ್ರ ಮತ್ತು ಬಲರಾಮ ಮೂರ್ತಿಗಳನ್ನು ಬೇರೆ ಬೇರೆ ರಥಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ ಈ ಸಮಯದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ.
 
ಈ ದೇವಸ್ಥಾನವು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ದರ್ಶನಕ್ಕೆ ತೆರೆದಿರುತ್ತದೆ. ನೀವು ಒಮ್ಮೆ ಈ ವಿಸ್ಮಯಕಾರಿ ದೇವಾಲಯಕ್ಕೆ ಭೇಟಿ ಕೊಟ್ಟು ದರ್ಶನವನ್ನು ಪಡೆಯಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲರ್ಸ್ ಕನ್ನಡದಲ್ಲಿ ಕೆಜಿಎಫ್ ಡೇಟ್ ಅನೌನ್ಸ್ ಆಯ್ತು